ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಐದನೆಯ ಪುಸ್ತಕ ಮಂದಾರ ಕೇಶವ ಭಟ್ಟ. ಅಸಾಮಾನ್ಯ ಶ್ರದ್ಧೆ, ಪರಿಶ್ರಮ, ಪಾಂಡಿತ್ಯ ಮತ್ತು ಒಳನೋಟಗಳಿಂದ ಮಹಾಕವಿ ರಸವನ್ನು ಪಡೆದವರು ಮಂದಾರ ಕೇಶವ ಭಟ್ಟ. ತಮ್ಮ ವಿಶಿಷ್ಟ ಕೃತಿಗಳ ಮೂಲಕ ತುಳು ಭಾಷೆಯ ಸಾಹಿತ್ಯ ಚರಿತ್ರೆಗೆ ವಿಶಿಷ್ಟ ತಿರುವನ್ನು ನೀಡಿದವರು. 'ಮಂದಾರ ರಾಮಾಯಣ'ವಲ್ಲದೆ 'ಕಣತ್ತ ಪೊಣ್ಣು’, ಜಾಗಂಟೆ', 'ಬೀರದ ಬೊಳು' ಕೃತಿಗಳು ತುಳು ಕಾವ್ಯಕ್ಷೇತ್ರಕ್ಕೆ ಮಂದಾರರ ವಿಶಿಷ್ಟ ಕೊಡುಗೆಗಳು. ಯಕ್ಷಗಾನ ಕ್ಷೇತ್ರದಲ್ಲಿ ಅವರ ಪ್ರಯೋಗಶೀಲತೆ ಮತ್ತು ಪಾಂಡಿತ್ಯ ಅನುಕರಣೀಯ. ತುಳು ಭಾಷೆಯನ್ನು ಸಮರ್ಥವಾಗಿ ಹೇಗೆ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟವರು ಮಂದಾರರು. ಎಲ್ಲಕ್ಕಿಂತಲೂ ಮುಖ್ಯವಾಗಿ ಆಡುಮಾತಿನ ಲಯವೂ ಕಾವ್ಯಭಾಷೆಯಾಗಲು ಸಾಧ್ಯ ಎಂಬುದನ್ನು ಮಂದಾರ ರಾಮಾಯಣದ ಮೂಲಕ ಸಾಧಿಸಿ ತೋರಿಸಿದರು. ಮಂದಾರ ರಾಮಾಯಣವು ತುಳು ಭಾಷೆ ಮತ್ತು ಜನಪದ ಸಂಸ್ಕೃತಿಯ ವಿಶ್ವಕೋಶದಂತಿದೆ. ಭಾರತೀಯ ಭಾಷಾ ಸಾಹಿತ್ಯ ಚರಿತ್ರೆಯಲ್ಲಿ ಈ ಕೃತಿಗೆ ವಿಶಿಷ್ಟ ಸ್ಥಾನವಿದೆ. ಅರ್ಹವಾಗಿಯೇ ಇದು ಇತರ ಪ್ರಶಸ್ತಿಗಳೊಡನೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಕೃತಿಯಾಗಿದೆ. ಮಂದಾರ ಕೇಶವ ಭಟ್ಟರ ಜೀವನ-ಸಾಧನೆಯನ್ನು ಈ ಕೃತಿ ನೀಡುತ್ತದೆ. ಈ ಪುಸ್ತಕ ಕಾಂತಾವರ ಕನ್ನಡ ಸಂಘದಿಂದಲೇ 2007ರಲ್ಲಿ ಮೊದಲ ಮುದ್ರಣ ಕಂಡಿತ್ತು.
©2025 Book Brahma Private Limited.