ಕಾಂತಾವರ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಲ್ಲಿ ಪ್ರಕಟಿಸಿರುವ 251ನೇ ಕೃತಿ ವಿಜಯಾ ವಿಷ್ಣು ಭಟ್. ಸಮಾಜ ಸೇವಕಿ, ಸಾಹಿತಿ ವಿಜಯಾ ವಿಷ್ಣು ಭಟ್ ಅವರು ಸಾಹಿತಿಯಾಗಿ, ಮಹಿಳಾ ಸಬಲೀಕರಣದ ಕಾರ್ಯಕರ್ತೆಯಾಗಿ ಕೆಲಸ ಮಾಡಿದ್ದಾರೆ. ವಿಜಯಾ ವಿಷ್ಣು ಭಟ್ ಅವರು ಮಾಡಿರುವ ಸಾಧನೆ ಮಾರ್ಗದರ್ಶಕವಾಗಿದೆ. ಖ್ಯಾತ ಸಾಹಿತಿ, ಪ್ರಶಸ್ತಿ ವಿಜೇತ ಶಿಕ್ಷಕ, ವೇದ ವಿದ್ವಾಂಸ ಡೋಂಗೆ ವಿಷ್ಣು ಭಟ್ ಅವರ ಪತ್ನಿಯಾಗಿರುವ ವಿಜಯಾ ಭಟ್ ಅವರು ಶಿಕ್ಷಣ ವಂಚಿತ ಬಡತನದ ಬಾಲ್ಯದಿಂದ ಮಹಿಳೆಯರಿಗೆ ಆದರ್ಶವಾಗುವವರೆಗೆ ಬೆಳೆದದ್ದು ಒಂದು ಯಶೋಗಾಥೆ. ಅವರು ಪತಿಯಂತೆ ಸ್ವಾಧ್ಯಾಯದಿಂದಲೇ ವಿದುಷಿಯಾದವರು.
©2025 Book Brahma Private Limited.