ಕಾಂತಾವರ ಕನ್ನಡ ಸಂಘದಿಂದ ’ನಾಡಿಗೆ ನಮಸ್ಕಾರ’ ಮಾಲೆಯಡಿ ಡಾ.ಶೈಲಾ ಯು. ಅವರು ಬರೆದ ಕೃತಿ ‘ಸಮನ್ವಯ ಸಾಹಿತ್ಯದ ಲೇಖಕಿ ಎ.ಪಿ. ಮಾಲತಿ’. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಎ.ಪಿ. ಮಾಲತಿ ಅವರ ಬದುಕು-ಬರೆಹ ಕುರಿತ ಸಮಗ್ರ ಮಾಹಿತಿಯನ್ನು ಒಳಗೊಂಡ ಕೃತಿ. ಸಾಹಿತ್ಯ ವಲಯದಲ್ಲಿ ಅವರು ನಿರ್ವಹಿಸಿದ ಸ್ಥಾನಗಳು ಹಾಗೂ ಪಡೆದ ಗೌರವಗಳು ಹೀಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಶೈಲಾ ಯು.,ಜನಿಸಿದ್ದು (11-11-1966) ಕುಂದಾಪುರದಲ್ಲಿ. ಮಂಗಳೂರು ವಿ.ವಿ.ಯಿಂದ ಎಂ.ಎ. ಪದವೀಧರರು. ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಶಾಸನಗಳ ಸಾಂಸ್ಕ್ರತಿಕ ಅಧ್ಯಯನ ವಿಷಯವಾಗಿ ಪಿಎಚ್.ಡಿ ಪದವಿ ಪಡೆದವರು. ಸ್ವತಂತ್ರ ಕೃತಿಗಳು: ತುಳುನಾಡಿನ ಶಾಸನಗಳ ಸಾಂಸ್ಕೃತಿಕ ಅಧ್ಯಯನ;2002 ಪಿ.ಎಚ್.ಡಿ ಸಂಶೋಧನ ಮಹಾಪ್ರಬಂಧದ ಗ್ರಂಥರೂಪ., ಶಿವರಾಮ ಕಾರಂತ :ವ್ಯಕ್ತಿ-ಅಭಿವ್ಯಕ್ತಿ (ಶಿವರಾಮ ಕಾರಂತ ಬದುಕು-ಬರಹಗಳ ಕುರಿತ ವಿಮರ್ಶಾ ಲೇಖನಗಳು), ಮಹಿಳೆ:ನೆಲೆ-ಬೆಲೆ(ಮಹಿಳಾಸಂಬಂಧಿ ವಿಮರ್ಶಾ ಲೇಖನಗಳು ), ಕೈಗನ್ನಡಿ (ಕನ್ನಡ ಸಾಹಿತ್ಯಸಂಬಂಧಿ ವಿಮರ್ಶಾ ಲೇಖನಗಳು), ಪ್ರಾದೇಶಿಕತೆಯೂ ಕಲ್ಲು ಹೇಳಿದ ಕಥೆಗಳೂ(ಶಾಸನಾಧಾರಿತ ಲೇಖನಗಳು), ಎ.ಪಿ.ಮಾಲತಿ ಅವರ ಬದುಕು-ಬರಹಗಳ ಕುರಿತು ಕೃತಿ ಪ್ರಕಟಣೆ ಸಂಪಾದಿತ ಕೃತಿಗಳು: ಅಬ್ಬಕ್ಕ ಸಂಕಥನ (ಉಳ್ಳಾಲ ರಾಣಿ ಅಬ್ಬಕ್ಕರ ಕುರಿತ ವಿಚಾರಸಂಕಿರಣದಲ್ಲಿ ...
READ MORE