ಚಿತ್ರ ಕಲಾವಿದ ಪಿ.ಎನ್. ಆಚಾರ್ಯ ಅವರ ಜೀವನ ಸಾಧನೆಯನ್ನು ಪರಿಚಯಿಸುವ ಪುಸ್ತಕವನ್ನು ಶೇಖರ ಅಜೆಕಾರು ಅವರು ಬರೆದಿದ್ದಾರೆ. ಕಾಂತಾವರ ಕನ್ನಡ ಸಂಘವು ಈ ಪುಸ್ತಕವನ್ನು ಪ್ರಕಟಿಸಿದೆ. ನಾಡಿಗೆ ನಮಸ್ಕಾರ ಸರಣಿಯಲ್ಲಿ 107ನೇ ಕೃತಿಯಿದು. ಕಲಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಆಚಾರ್ಯ ಅವರ ಕಲಾಕೃತಿಗಳನ್ನು ಈ ಪುಸ್ತಕ ಪರಿಚಯಿಸುತ್ತದೆ.
ಪತ್ರಕರ್ತ ಶೇಖರ ಅಜೆಕಾರು ಸಾಹಿತಿ-ಸಂಘಟಕ. ಕನ್ನಡ ಸಾಹಿತ್ಯದಲ್ಲಿ ಎಂ.ಎ. ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವೀಧರ. ಮಕ್ಕಳಲ್ಲಿ ಹಾಗೂ ತಮ್ಮ ಪರಿಧಿಗೆ ಬಂದವರಿಗೆ ಸಾಹಿತ್ಯ ಮತ್ತು ಕಾವ್ಯದ ಸೊಗಸನ್ನು ತಿಳಿಸಲು ಮೊದಲು ಗ್ರಾಮೋತ್ಸವ ನಂತರ ಬೆಳದಿಂಗಳ ಸಾಹಿತ್ಯೋತ್ಸವಗಳನ್ನು ಸಂಘಟಿಸುತ್ತಿದ್ದಾರೆ. ತಾವು ಸುತ್ತಾಡಿದ ಮುಂಬಯಿ, ಮೂಡಬಿದ್ರಿ, ಅಜೆಕಾರು, ಕಾರ್ಕಳ ಮುಂತಾದ ಸ್ಥಳಗಳ ಬಗ್ಗೆ ಸಮಗ್ರ ಮಾಹಿತಿ ಕೈಪಿಡಿಗಳನ್ನು ಪ್ರಕಟಿಸಿದ್ದಾರೆ. ಕಂಬಳ ಬೂಕ್ 1 ಮತ್ತು ಆನಂದದ ಅಧಿಪತಿ ಎಂಬ ಪುಸ್ತಕಗಳ ಇ-ಆವೃತ್ತಿಗಳನ್ನು ಹಾಗೂ ಕಂಬಳ ಬೂಕ್ 2, 3 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಖ್ಯಾತ ಕಲಾವಿದ ಪಿ.ಎನ್.ಆಚಾರ್ಯರ ಕುರಿತ ಕೃತಿಯನ್ನು ರಚಿಸಿದ್ದು ‘ಅಗ್ನಿ ಶಿಖಾ ಮಂಚ್ ಪ್ರಶಸ್ತಿ’, ‘ವಿಶ್ವಚೇತನ ಪ್ರಶಸ್ತಿ’ ಗಳು ...
READ MORE