ಕಾಂತಾವರ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಲ್ಲಿ ಪ್ರಕಟಿಸಿರುವ 286ನೇ ಕೃತಿ ’ಕೂಡ್ಲು ಗೋಪಾಲಕೃಷ್ಣ ಶ್ಯಾನುಭಾಗ’. ಅವರ ಮನೆತನ ನಾಡಿನ ಭವ್ಯ ಇತಿಹಾಸ ಉಳ್ಳ ಮನೆತನಗಳಲ್ಲಿ ಒಂದು. ಅಭಿಜಾತ ಕಲಾವಿದರಾದ ಅವರು ಸಂಗೀತ, ನಾಟಕ, ಚಿತ್ರಕಲೆ, ಯಕ್ಷಗಾನ ಹೀಗೆ ಹತ್ತು ಹಲವು ಕಲಾಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರು ತಮ್ಮ ಸ್ವಂತ ಪರಿಶ್ರಮದಿಂದ ಶಿಲ್ಪಕಲೆ, ರಂಗಸಜ್ಜಿಕೆ, ಹಾರ್ಮೋನಿಯಂ ಮುಂತಾದ ಕಲಾಪ್ರಭೇದಗಳಲ್ಲಿ ಪಾಂಡಿತ್ಯ ಸಾಧಿಸಿದವರು. ಆಯಸ್ಕಾಂತ ಚಿಕಿತ್ಸಾ ವಿಧಾನ, ಏಕಮೂಲಿಕೆ ಔಷಧಿ, ಧ್ಯಾನ ಮೊದಲಾದ ವಿಷಯಗಳಲ್ಲಿ ಪ್ರಚಾರವನ್ನು ಬಯಸದೆ ತಮ್ಮನ್ನು ತಾವು ತೊಡಗಿಸಿಕೊಂಡ ವಿಶೇಷ ಸಂಗತಿಗಳು ಈ ಕೃತಿಯಲ್ಲಿ ಅಡಕವಾಗಿವೆ.
©2025 Book Brahma Private Limited.