ಅನನ್ಯ ರಂಗಕರ್ಮಿ ಶ್ರೀಪತಿ ಮಂಜನಬೈಲು ರಂಗನಿರ್ದೇಶಕರಾಗಿ ಯಶಸ್ವಿಯಾದವರು. ತಮ್ಮ ಅಪಾರ ಪುಸ್ತಕಪ್ರೇಮದಿಂದ ಹೆಸರುವಾಸಿಯಾಗಿರುವ ಶ್ರೀಪತಿ ಅವರು ಸದ್ಯ ಬೆಳಗಾವಿಯ ನಿವಾಸಿ. ಶ್ರೀಪತಿ ಅವರ ಬದುಕು ಹಾಗೂ ರಂಗಭೂಮಿಯ ಸಾಧನೆಯನ್ನು ನಾಟಕಕಾರ-ಪತ್ರಕರ್ತ ಗೋಪಾಲ ವಾಜಪೇಯಿ ಅವರು ರಚಿಸಿದ್ದಾರೆ. ಕಾಂತಾವರದ ಕನ್ನಡ ಸಂಘವು ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯ 136ನೇ ಕೃತಿಯಿದು.
ಪಂಪನ ಪುಲಿಗೆರೆಯಾದ ಲಕ್ಷೆಶ್ವರದಲ್ಲಿ (ಗದಗ ಜಿಲ್ಲೆ) ಜನಿಸಿದ ಗೊಪಾಲ ವಾಜಪೇಯಿ (1951) ಅವರು ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ, ರಂಗಭೂಮಿ ಹಾಗೂ ಜಾನಪದಗಳಲ್ಲಿ ಆಸಕ್ತಿ ಹೊಂದಿದ್ದರು. 'ಸಂಯುಕ್ತ ಕರ್ನಾಟಕ', 'ಕರ್ಮವೀರ' ಹಾಗೂ 'ಕಸ್ತೂರಿ' ಪತ್ರಿಕೆಗಳಲ್ಲಿ ಉಪಸಂಪಾದಕ ಸ್ಥಾನದಿಂದ ಸಂಪಾದಕ ಸ್ಥಾನದ ತನಕ ಮೂರು ದಶಕಗಳ ಸೇವೆ ಸಲ್ಲಿಸಿದ್ದರು. ಈ ಟೀವಿ ಕಥಾವಿಭಾಗದ ಸಂಯೋಜಕರಾಗಿ ಆರು ವರ್ಷಗಳ ಸೇವೆ ಸಲ್ಲಿಸಿದ ಅವರು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿದ್ದರು (1987-90). ಗೋಪಾಲ ವಾಜಪೇಯ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿಗಳು ಪ್ರಶಸ್ತಿ ನೀಡಿ ...
READ MORE