ಕಾಂತಾವರ ಕನ್ನಡ ಸಂಘ ಪ್ರಕಟಿಸುತ್ತಿರುವ ’ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 243ನೇ ಪುಸ್ತಕ. ಶಾಶ್ವತ ಕೀರ್ತಿಯ ಶಾಸಕ ಕೆ. ದೂಮಪ್ಪ ಅವರು ಬಿಲ್ಲವ ಸಮಾಜದಲ್ಲಿ ಮೊದಲು ಪದವಿ ಪಡೆದವರಲ್ಲಿ ಒಬ್ಬರಾಗಿದ್ದರು. ಅಂದಿನ ಮದರಾಸ್ ಸರಕಾರದ ಮೀನುಗಾರಿಕಾ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿ, ಮತ್ಸೋದ್ಯಮದ ಬೆಳವಣಿಗೆಗೆ ಶ್ರಮಿಸಿದರು. ಜಿಲ್ಲೆಯ ಫಿಶರೀಸ್ ಶಾಲೆಗಳ ಸ್ಥಾಪನೆ, ಉಸ್ತುವಾರಿಯಲ್ಲಿ ತೊಡಗಿಕೊಂಡ ವಿದ್ಯಾಪ್ರೇಮಿ ಅವರಾಗಿದ್ದರು. ನಿವೃತ್ತರಾದ ಬಳಿಕ ಸುರತ್ಕಲ್ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಭಕ್ತರಾಗಿ ಅವಿಸ್ಮರಣೀಯ ಸಾಧನೆ ಮಾಡಿರುವ ಕೆ.(ಕಂಕನಾಡಿ) ದೂಮಪ್ಪ ಅವರದು ಮಾದರಿ ವ್ಯಕ್ತಿತ್ವ, ಅವರು ಗಾಂಧಿವಾದಿ, ಸದಾ ಶ್ವೇತ ವಸ್ತ್ರಧಾರಿ, ಬಡವರ ಪಕ್ಷಪಾತಿ, ಪರೋಪಕಾರಿ, ಶ್ರೀಮಂತರು-ಬಡವರು, ದೊಡ್ಡವರು-ಸಣ್ಣವರು ಎಂಬ ಭೇದ ಭಾವ ಮಾಡದೆ ಎಲ್ಲರಿಗೂ ಸಹಾಯ ಒದಗಿಸುತ್ತಿದ್ದವರು. ಅವರ ಬದುಕು-ಸಾಧನೆಯನ್ನು ಈ ಕೃತಿ ಕಟ್ಟಿಕೊಡುತ್ತದೆ.
©2024 Book Brahma Private Limited.