ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 233 ನೇ ಪುಸ್ತಕ ಪಡಾರು ಮಹಾಬಲೇಶ್ವರ ಭಟ್. ಹಿರಿಯ ಸಾಹಿತಿ, ಜಾನಪದ ಸಂಶೋಧಕ ಪಡಾರು ಮಹಾಬಲೇಶ್ವರ ಭಟ್ ಪಡಾರು ಮಹಾಬಲೇಶ್ವರ ಭಟ್ಟರು ಹವಿಗನ್ನಡ ಸಾಹಿತ್ಯದ ಸಂಶೋಧಕ, ಸ್ವತಃ ಕನ್ನಡ ಮತ್ತು ಹವಿಗನ್ನಡಗಳಲ್ಲಿ ಬರೆಯುವ ಕವಿ ಮತ್ತು ಕತೆಗಾರ. ಅವರ ಕತೆಯೊಂದಕ್ಕೆ (ಮಾರಿಬಲೆ ಬೀಸಿತ್ತು) 1960ರ 'ಪ್ರಜಾವಾಣಿ' ವಾರ್ಷಿಕ ಕಥಾಸ್ಪರ್ಧೆಯ ಪ್ರಥಮ ಬಹುಮಾನ ಬಂದಿದ್ದುದು ಅವರ ಬರವಣಿಗೆಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಸಾಹಿತ್ಯ ಸಂಶೋಧನೆ, ಬರವಣಿಗೆ, ಕೃಷಿಗಳಲ್ಲಿ ತೊಡಗಿಕೊಂಡಿರುವ ಸಾರ್ಥಕ ಬದುಕು ಅವರದು.
©2024 Book Brahma Private Limited.