ಕಾಂತಾವರದ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಅಡಿಯಲ್ಲಿ ಪ್ರಕಟಿಸಿದ 252ನೇ ಪುಸ್ತಕ ಸಿರಿಬಾಗಿಲು ವೆಂಕಪ್ಪಯ್ಯ. ಸಾಹಿತಿ, ಸಂಶೋಧಕ ಸಿರಿಬಾಗಿಲು ವೆಂಕಪ್ಪಯ್ಯ ಅವರು ಕಾಸರಗೋಡಿನ ಸಿರಿಬಾಗಿಲು ಎಂಬ ಊರಿನ ಪೋಸ್ಟ್ ಮಾಸ್ಟರ್ ಆಗಿದ್ದರು. ಸಿರಿಬಾಗಿಲು ವೆಂಕಪ್ಪಯ್ಯ ಅವರು ಕನ್ನಡನಾಡಿನ ಒಬ್ಬ ಅಪೂರ್ವ ಸಾಹಿತಿ, ಅವರು ಸ್ಥಳೀಯ ಇತಿಹಾಸ ಸಂಶೋಧನೆಯಲ್ಲಿ ಆಸಕ್ತಿ ಇದ್ದ ಚಿಂತಕ ಮತ್ತು ಬರಹಗಾರ. ಅವರು 1969ರಲ್ಲಿ ಪ್ರಕಟಿಸಿದ 'ಜಗಜಟ್ಟಿ ಬಾಚ' ಒಂದು ಅಪೂರ್ವ ಸ್ಥಳೀಯ ಇತಿಹಾಸ ಕೃತಿ. ವೆಂಕಪ್ಪಯ್ಯ ಖ್ಯಾತ ಶಿಶು ಸಾಹಿತಿಯೂ ಆಗಿದ್ದರು. ಅವರ ಬರಹಗಳಲ್ಲಿ ಕಾಲಂಶ ಮಾತ್ರ ಈಗ ಲಭ್ಯವಿದೆ. ಅವರ ಲಭ್ಯ ಕೃತಿ | ಗಳನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಂಸ್ಕರಣ ಸಮಿತಿ ಪ್ರಕಟಿಸಿದೆ. (ಸಂಪಾದಕರು ರಾಧಾಕೃಷ್ಣ ಉಳಿಯತ್ತಡ್ಕ).
©2024 Book Brahma Private Limited.