ಹಿರಿಯ ಕತೆಗಾರ್ತಿ ಗಂಗಾ ಪಾದೇಕಲ್ಲು ಅವರ ಬದುಕು ಮತ್ತು ಬರೆಹ ಪರಿಚಯಿಸುವ ಕೃತಿಯನ್ನು ಕಾಂತಾವರದ ಕನ್ನಡ ಸಂಘವು ಪ್ರಕಟಿಸಿದೆ. ಕನ್ನಡ ಸಂಘದ ನಾಡಿಗೆ ನಮಸ್ಕಾರ ಸರಣಿಯ 177 ಪುಸ್ತಕವಿದು, 70ರ ದಶಕದಲ್ಲಿ ಬರವಣಿಗೆ ಆರಂಭಿಸಿದ ಗಂಗಾ ಅವರು ಸಣ್ಣಕತೆ ಮತ್ತು ಕಾದಂಬರಿಗಳನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮ ಆಗಿಸಿಕೊಂಡವರು. ಆಪ್ತ-ಹೃದಯಂಗಮ ನಿರೂಪಣಾ ಶೈಲಿ, ವೈಚಾರಿಕ ದೃಷ್ಟಿಕೋನ, ವಾಸ್ತವಪ್ರಜ್ಞೆ, ತಾರ್ಕಿಕ ಮನೋಭಾವಗಳು ಅವರ ಬರೆಹದಲ್ಲಿ ಎದ್ದು ಕಾಣಿಸುತ್ತವೆ. ಕನ್ನಡ ಕಥನಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ ಗಂಗಾ ಪಾದೇಕಲ್ಲು ಅವರ ಜೀವನ-ಸಾಧನೆಯನ್ನು ಈ ಕೃತಿಯು ಕಟ್ಟಿಕೊಡುತ್ತದೆ.
©2025 Book Brahma Private Limited.