ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 234ನೇ ಪುಸ್ತಕ ಪ್ರೊ. ಜಿ.ಆರ್. ರೈ. ತಾಂತ್ರಿಕ ಶಿಕ್ಷಣದ ದಿಗ್ಗಜ-ಸಾಹಿತ್ಯ ಪ್ರೇಮಿ ಪ್ರೊ. ಜಿ.ಆರ್. ರೈ ಜಿಲ್ಲೆಯ ಇಂಜಿನಿಯರಿಂಗ್ ಶಿಕ್ಷಣ ಕ್ಷೇತ್ರದ ದಿಗ್ಗಜವಾಗಿರುವ ಪ್ರೊ.ಜಿ.ರಘುನಾಥ ರೈಗಳದು ಒಂದು ಆದರ್ಶ ವ್ಯಕ್ತಿತ್ವ. ಸಮೃದ್ಧವಾದ ಸುಸಂಸ್ಕೃತವಾದ ಅಂತರಂಗ, ಸಮಾಜಮುಖಿ ಚಿಂತನೆಯ ಜಿ.ಆರ್.ರೈಯವರದು ಸರ್. ಎಂ. ವಿಶ್ವೇಶ್ವರಯ್ಯ ನವರ ಮಾದರಿ. ದೀರ್ಘಾಯುಷ್ಯದಲ್ಲಿಯೂ ಇವರಿಗೆ ಅವರೇ ಸರಿ! ಅವರು ಇಂಜಿನಿಯರಿಂಗ್ ವಿಷಯಗಳ ಜತೆಗೆ ಪಂಪ, ರನ್ನ, ಕುಮಾರವ್ಯಾಸ, ಕಾರಂತ, ಭೈರಪರ ಸಾಹಿತ್ಯವನ್ನೂ ಅಂತರಂಗದ ಭಾಗವಾಗಿಸಿಕೊಂಡವರು. ಮದ್ರಾಸ್ ಸರಕಾರದಲ್ಲಿ ಇಂಜಿನಿಯರಿಂಗ್ ವಿಭಾಗಗಳಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದ ರೈಗಳು, ಮಣಿಪಾಲ ಇಂಜಿನಿಯರಿಂಗ್ ಕಾಲೇಜಿನಲ್ಲಿ 21 ವರ್ಷಗಳ ಕಾಲ ಪ್ರೊಫೆಸರ್ ಆಗಿ, ನಿಟ್ಟೆ ಇಂಜಿನಿಯರಿಂಗ್ ಕಾಲೇಜು, ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ, ಮೂಡಬಿದಿರೆ ಎಂ.ಐ.ಟಿ.ಯ ಗೌರವ ಸಲಹೆಗಾರರಾಗಿ ಈ ಕ್ಷೇತ್ರಕ್ಕೆ ಅನನ್ಯ ಸೇವೆಸಲ್ಲಿಸಿದ್ದಾರೆ. ರೈಗಳು ಮಣಿಪಾಲ ಸಾಹಿತ್ಯ ಸಂಘದ ಅಧ್ಯಕ್ಷರಾಗಿ ಮಾಡಿರುವ ಸಾಧನೆ ಈ ಜಿಲ್ಲೆಯ ಸಾಹಿತ್ಯ ಇತಿಹಾಸದಲ್ಲಿ ದಾಖಲಾಗಿರುವ ಉಜ್ವಲ ಅಧ್ಯಾಯವಾಗಿದೆ.
©2025 Book Brahma Private Limited.