ಕಾಂತಾವರ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಲ್ಲಿ ಪ್ರಕಟಿಸಿರುವ 288ನೇ ಕೃತಿ ’ಶಂಪಾ ದೈತೋಟ’. ಕರಾವಳಿ ಕರ್ನಾಟಕದ ಸಾಹಿತ್ಯ, ಸಾಮಾಜಿಕ ಕ್ಷೇತ್ರಗಳಲ್ಲಿ ಚಿರಪರಿಚಿತರಾದ ಅವರು ಸಮಷ್ಟಿಯ ಹಿತಕ್ಕಾಗಿ ತುಡಿಯುತ್ತಿದ್ದ ಬಹುಮುಖ ವ್ಯಕ್ತಿತ್ವ ಅವರದು. ಪಾಣಾಜೆಯ ಪ್ರಸಿದ್ದ ಮೂಲಿಕಾ ವೈದ್ಯಪರಂಪರೆಯ ಮನೆತನದಲ್ಲಿ ಜನಿಸಿದ ಅವರು ಸಾಹಿತಿ, ಪತ್ರಕರ್ತ, ಪ್ರಯೋಗಶೀಲ ಕೃಷಿಕ, ಭಾಷಾಪ್ರೇಮಿ, ಪರಿಸರ ಹೋರಾಟಗಾರ, ಆಯುರ್ವೇದ ತಜ್ಞ, ಸಂಘಟಕ, ಸಂಪನ್ಮೂಲ ವ್ಯಕ್ತಿ ಹೀಗೆ ಹಲವು ಆಯಾಮಗಳಲ್ಲಿ ಬೆಳೆದುನಿಂತು ಛಲಗಾರ. ಜೀವಪರ ಪ್ರೀತಿಗೆ ಮಿಡಿಯುತ್ತಿದ್ದ ಶಂಪಾ ದೈತೋಟ ಜಾಗತೀಕರಣ, ಆಧುನೀಕರಣಗಳ ಸಾಧ್ಯತೆ ಮತ್ತು ಸವಾಲುಗಳ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದವರು.
©2025 Book Brahma Private Limited.