ಕಾಂತಾವರ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಲ್ಲಿ ಪ್ರಕಟಿಸಿರುವ 183ನೇ ಕೃತಿ ಕೆ.ಪಿ. ವೆಂಕಪ್ಪ ಶೆಟ್ಟಿ. ಯಕ್ಷಗಾನ ಕೂಟ, ಪುರಾಣ ಪ್ರವಚನ, ಪಾಠೇತರ ಚಟುವಟಿಕೆಗಳನ್ನು ಕಂಡ ಶೆಟ್ಟರು ತನ್ನ ಮನೆಯಲ್ಲಿ ಬಲು ಹಿಂದಿನ ಕಾಲದಿಂದಲೂ ಇದ್ದ ರಾಮಾಯಣ, ಮಹಾಭಾರತ, ಭಾಗವತ, ಜೈಮಿನಿ ಭಾರತ, ಹರಿಶ್ಚಂದ್ರ ಕಾವ್ಯಗಳನ್ನು ಆಳವಾಗಿ ಅಭ್ಯಸಿಸಿ, ಅವುಗಳಿಗೆ ಅರ್ಥ ವಿವರಣೆ ಕೊಡಲು ಪ್ರಾರಂಭಿಸಿದರು. ತಾನು ಸುಪ್ರಸಿದ್ದ ಯಕ್ಷಗಾನ ಕಲಾವಿದರಿಂದ ಯಕ್ಷಗಾನದ ಹಾಡುಗಾರಿಕೆ, ತಾಳ, ಲಯಗಳ ಕ್ರಮಬದ್ದ ಅಭ್ಯಾಸದೊಂದಿಗೆ ಚೆಂಡೆ, ಮದ್ದಳೆ, ಮೊದಲಾದ ಹಿಮ್ಮೇಳವನ್ನು ಕಲಿತುಕೊಂಡರು. ಸ್ವತಃ ಇವುಗಳಲ್ಲಿ ಸ್ಪೂರ್ತಿ ಮತ್ತು ಪ್ರೇರಣೆಗೊಂಡು ಯಕ್ಷಗಾನದ ಹಾಡುಗಳನ್ನು ತಾನೇ ಹಾಡಿ ತನ್ನ ಶಿಷ್ಯ ಬಳಗದವರಿಂದ ಅರ್ಥಹೇಳಿಸಿ, ಆ ಕಲೆಗೆ ಗುರುವಾಗುವಷ್ಟು ಸಕಲ ಸಾಮರ್ಥ್ಯವನ್ನು ಬೆಳೆಸಿಕೊಂಡರು, ಎತ್ತರಕ್ಕೆ ಏರಿದರು. ಹೀಗೆ ಯಕ್ಷಗಾನದಲ್ಲಿ ಅರ್ಥಗಾರಿಕೆಗೆ ವಿಶೇಷ ಮನ್ನಣೆ ಕೊಡಲು ಕಾರಣರಾದ ವೆಂಕಪ್ಪ ಶೆಟ್ಟರ ಜೀವನ-ಸಾಧನೆಯನ್ನು ಈ ಕೃತಿಯು ಕಟ್ಟಿಕೊಡುತ್ತದೆ.
©2024 Book Brahma Private Limited.