ಕಡವ ಶಂಭು ಶರ್ಮರು ನವೋದಯ ಕಾಲಘಟ್ಟದ ಹಿರಿಯ ವಿದ್ವಾಂಸರು. ಡಿ.ವಿ. ಗುಂಡಪ್ಪನವರ ’ಮಂಕುತಿಮ್ಮನ ಕಗ್ಗ’ ಕೃತಿಯನ್ನು ಸಂಸ್ಕೃತಕ್ಕೆ ಅನುವಾದಿಸಿದ್ದ ಶಂಭುಶರ್ಮ ಅವರು ನಾಥಪಂಥದ ಪ್ರಮುಖ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ತುಳು ಭಾಷೆ, ಪ್ರಾಚೀನತೆಯನ್ನು ಕುರಿತ ಅವರ ’ತುಳುದೇಶಭಾಷಾ ವಿಚಾರವು’ ಕೃತಿಯನ್ನು 1955ರಲ್ಲಿಯೇ ಪ್ರಕಟಿಸಿದ್ದರು. ಬಿ.ಎಂ. ಶ್ರೀ ಅವರ ಕಾವ್ಯದ ನಿಲುವನ್ನು ಟೀಕಿಸಿದ್ದ ಶಂಭು ಶರ್ಮರು ಕನ್ನಡ ವಿದ್ವಾಂಸ ಪರಂಪರೆಯಲ್ಲಿ ಪ್ರಮುಖ ವ್ಯಕ್ತಿ. ಅವರ ಬದುಕು-ಬರಹವನ್ನು ಕುರಿತ ಈ ಪುಸ್ತಕವನ್ನು ಎಚ್.ಜಿ. ಶ್ರೀಧರ್ ಅವರು ರಚಿಸಿದ್ದಾರೆ.
ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ಎಚ್.ಜಿ. ಶ್ರೀಧರ ಅವರು ಕನ್ನಡ ವಿಭಾಗ ಮುಖ್ಯಸ್ಥರು ಕೂಡ. ಹೆಸರಾಂತ ವಿಮರ್ಶಕ, ಸಂಶೋಧಕರಾಗಿರುವ ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ಮುಂಡಿಗೆಹಳ್ಳದವರು. ಸಾಗರದ ಲಾಲ್‌ಬಹಾದೂರ್ ಶಾಸ್ತಿ ಕಾಲೇಜಿನಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪಡೆದಿದ್ದಾರೆ. ’ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ' ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಯನ ಮಂಡಳಿ ಮತ್ತು ಪರೀಕ್ಷಾ ಮಂಡಳಿ, ಪದವಿ ತರಗತಿ ಪಠ್ಯಪುಸ್ತಕಗಳ ರಚನಾ ಸಮಿತಿ; ಕ್ಯಾಲಿಕತ್ ವಿಶ್ವವಿದ್ಯಾಲಯದ ಪದವಿ ಪರೀಕ್ಷಾ ಮಂಡಳಿಯ ಸದಸ್ಯರಾಗಿರುವ ಅವರು ...
READ MORE