ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 240ನೇ ಕೃತಿಯಿದು. ಅದಮೃ ಕ್ರಿಯಾಶೀಲತೆಯ ಪ್ರತೀಕ ಬಿ. ಪುರಂದರ ಭಟ್ ಪುತ್ತೂರಿನ ಸಾಂಸ್ಕೃತಿಕ, ಸಾಮಾಜಿಕ ಇತಿಹಾಸದಲ್ಲಿ ಅಚ್ಚಳಿಯದ ಮುದ್ರೆಯನ್ನೊತ್ತಿದವರು. ಶಿವರಾಮ ಕಾರಂತರು, ಮೊಳಹಳ್ಳಿ ಶಿವರಾಯರ ನಂತರದ ಸಾಲಿನಲ್ಲಿ ಸೇರುವ, ಸೇರಬೇಕಾದ ಹೆಸರು ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷರಾದ ಬಿ. ಪುರಂದರ ಭಟ್ಟರದು. ಪುತ್ತೂರಿನ ಜನರ ಸಾಂಸ್ಕೃತಿಕ ಸಂವೇದನೆಗೆ ಸಾಕ್ಷಿಯಂತೆ ನಿಂತವರು ಪುರಂದರ ಭಟ್ಟರು. ವಕೀಲ, ಅಧ್ಯಾಪಕ, ಟ್ರೇಡ್ ಯೂನಿಯನ್ ನೇತಾರ ಇವೆಲ್ಲ ಪುರಂದರ ಭಟ್ಟರ ಸಾಮಾಜಿಕ ವ್ಯಕ್ತಿತ್ವವಾದರೆ, ಕವಿ, ಲೇಖಕ, ಚಿಂತಕ, ಕಲಾಪೋಷಕ, ಸಂಘಟಕ ಇತ್ಯಾದಿಗಳು ಅವರ ವ್ಯಕ್ತಿತ್ವದ ಇನ್ನೊಂದು ಆಪ್ತ ಮುಖ. ಅವರು ನಡೆಸುತ್ತಿದ್ದ ಸಾಹಿತ್ಯ ಕಲಾ ಕುಶಲೋಪರಿ, ಲಕ್ಷ್ಮೀಶ ತೋಳ್ಳಾಡಿಯವರ ಪ್ರವಚನ ಮಾಲಿಕೆ, ಕರ್ನಾಟಕ ಸಂಘದ ಹಲವಾರು ಅಮೂಲ್ಯ ಪ್ರಕಟಣೆಗಳು - ಇವೆಲ್ಲ ಪುರಂದರ ಭಟ್ಟರ ಕೊಡುಗೆಯನ್ನು ಬಹುಕಾಲ ನೆನಪಿನಲ್ಲುಳಿಯುವಂತೆ ಮಾಡುತ್ತವೆ. ಪುರಂದರ ಭಟ್ ಅವರ ಸಾಧನೆಯನ್ನು ಈ ಕೃತಿ ನೀಡುತ್ತದೆ.
©2024 Book Brahma Private Limited.