ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 231ನೇ ಕೃತಿ. ಕಾಯಕ ಯೋಗಿ ಕೃಷ್ಣ ಸೋಮಯಾಜಿ ಬಂಟ್ವಾಳದ ಕೃಷ್ಣ ಸೋಮಯಾಜಿಯವರು ಕಾಯಕಯೋಗಿ ಎಂಬ ಪರಿಕಲ್ಪನೆಗೆ ಉದಾಹರಣೆಯಂತಿದ್ದಾರೆ. ಅವರು ಗಾಂಧೀಜಿ, ವಿವೇಕಾನಂದರು, ಗೋಖಲೆಯವರು, ವಿನೋಬಾಭಾವೆ ಮುಂತಾದ ನಾಯಕರನ್ನು ಆದರ್ಶವಾಗಿ ಇಟ್ಟುಕೊಂಡಿದ್ದವರು. ಜೀವನದ ಕೊನೆಯ ತನಕವೂ ಖಾದಿಬಟ್ಟೆ ಮತ್ತು ಟೋಪಿ ಧರಿಸುತ್ತಿದ್ದ ಸೋಮಯಾಜಿಯವರು ಪ್ರಾರಂಭದಲ್ಲಿ ಯಶಸ್ವೀ ಜವಳಿ ಉದ್ಯಮಿಯಾಗಿದ್ದರೂ ಅದನ್ನು ಬಿಟ್ಟುಕೊಟ್ಟು ಕೃಷಿಯನ್ನು ಒಂದು ಜೀವನ ಪ್ರೀತಿಯ ಅಭಿವ್ಯಕ್ತಿಯಾಗಿ ಹಮ್ಮಿಕೊಂಡಿದ್ದರು. ತಮ್ಮ ಸ್ವಂತ ಖರ್ಚಿನಲ್ಲಿ ಗ್ರಾಮಕ್ಕೆ ರಸ್ತೆಯನ್ನು ಮಾಡಿಸುವುದು, ಭೂರಹಿತರಿಗೆ ಭೂಮಿ ಒದಗಿಸಿಕೊಟ್ಟು ಕೃಷಿಗೆ ನೆರವಾಗುವುದು ಮುಂತಾಗಿ ಸದ್ದಿಲ್ಲದೆ ಸಮಾಜಕಲ್ಯಾಣ ಮತ್ತು ಗ್ರಾಮಾಭಿವೃದ್ಧಿಯನ್ನು ಸಾಧಿಸಿದವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ತತ್ವಾದರ್ಶ ಗಳನ್ನು ಪಾಲಿಸುತ್ತಾ ಜಾತಿಭೇದವಿಲ್ಲದೆ ಸರ್ವರ ಬದುಕಿನ ಏಳಿಗೆಯ ಸೂತ್ರಗಳನ್ನು ರಚಿಸಿ ಅನುಷ್ಠಾನಕ್ಕೆ ತಂದವರು ಕಾಯಕಯೋಗಿ ಕೃಷ್ಣ ಸೋಮಯಾಜಿಯವರು. ಅವರ ಜೀವನ ಸಾಧನೆಯನ್ನು ಈ ಪುಸ್ತಕ ಕಟ್ಟಿಕೊಡುತ್ತದೆ.
©2025 Book Brahma Private Limited.