ಹೆಸರಾಂತ ಶಿಕ್ಷಣ ತಜ್ಞ ಕೆ. ಆರ್. ಹಂದೆ ಅವರ ಜೀವನ-ಸಾಧನೆಯನ್ನು ಪರಿಚಯಿಸುವ ಕೃತಿ. ಶಿಕ್ಷಣಶಾಸ್ತ್ರಜ್ಞರಾಗಿರು ಹಂದೆ ಅವರ ಕೊಡುಗೆ ಅಪಾರವಾದದ್ದು. ಅದನ್ನು ಈ ಕೃತಿಯಲ್ಲಿ ಹೇರ್ಳೆ ಅವರು ಕಟ್ಟಿಕೊಟ್ಟಿದ್ದಾರೆ. ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ’ನಾಡಿಗೆ ನಮಸ್ಕಾರ’ ಸರಣಿಯ 112ನೇ ಪುಸ್ತಕ.
ರಾಘವೇಂದ್ರ ಹೇರ್ಳೆ ಗಿಳಿಯಾರು ಖ್ಯಾತ ಶಿಕ್ಷಣ ತಜ್ಞರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು, 1973ರಲ್ಲಿ ಜನಿಸಿದರು. ಮಂಗಳೂರು ವಿ.ವಿ.ಯಿಂದ ಕನ್ಯನಡದಲ್ಲ್ಲಿಲಿ ಎಂ.ಎ. ಪದವೀಧರರು. ಬಿ.ಎಡ್. ಮತ್ತು ಎಂ.ಎಡ್. ಪದವೀಧರರು. ಭಾಷಾ ಬೋಧನೆ ಮತ್ತು ಮೌಲ್ಯಯುತ ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ಪಠ್ಯಪುಸ್ತಕಗಳನ್ನು ರಚಿಸಿದ್ದಾರೆ. ‘ಮೌಲ್ಯಯುತ ಶಿಕ್ಷಣ, ಕನ್ನಡ ಬೋಧನೆ ವಿಧಾನ, ಕಲಿಕೆಯನ್ನು ಅನುಕೂಲಿಸುವುದು ಕನ್ನಡ-೧ ಮತ್ತು ಕಲಿಕೆಯನ್ನು ಅನುಕೂಲಿಸುವುದು ಕನ್ನಡ-೨’ ಮುಂತಾದ ಪರಾಮರ್ಶನ ಕೃತಿಗಳ ಕರ್ತೃ. ...
READ MORE