ಕಾಂತಾವರ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಲ್ಲಿ ಪ್ರಕಟಿಸಿರುವ 186ನೇ ಕೃತಿ. ಕವಿ, ಯಕ್ಷಗಾನ ಅರ್ಥಧಾರಿ, ನಾಟಕಕಾರ, ಪ್ರಸಂಗಕರ್ತ, ಹರಿದಾಸ-ಜಿನದಾಸ, ಪ್ರಾಥಮಿಕ ಶಾಲಾಧ್ಯಾಪಕ ಅಂಬಾತನಯ ಮುದ್ರಾಡಿ. ಹಳ್ಳಿಯ ಶಾಲೆಗಳ ನೂರಾರು ಅನುಭವಗಳನ್ನುಳ್ಳ ಭಂಡಾರ ಅವರಲ್ಲಿದೆ. ಹಳ್ಳಿಯ ಜೀವನ ಮತ್ತು ಅಧ್ಯಾಪನ ಜೀವನದ ದಟ್ಟ ಅನುಭವ ಅವರದು. ಮುದ್ರಾಡಿ ಅಂಬಾತನಯ ಅವರ ಜೀವನ-ಸಾಧನೆಯನ್ನು ಈ ಕೃತಿಯು ಕಟ್ಟಿಕೊಡುತ್ತದೆ.
ಪಾದೇಕಲ್ಲು ವಿಷ್ಣು ಭಟ್ಟ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿ 06-02-1956 ರಂದು ಜನಿಸಿದರು. ಇವರ ತಂದೆ ಶ್ರೀ ಪಾದೇಕಲ್ಲು ನಾರಾಯಣ ಭಟ್ಟ, ತಾಯಿ ಶ್ರೀಮತಿ ಶಾರದಾ. ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರ್ಣಗೊಳಿಸಿದ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಪಡೆದರು. ಆನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಥಮಸ್ಥಾನದಲ್ಲಿ ಎಂ.ಎ ಪದವಿ ಪಡೆದರು. ‘ಭಾಗವತದ ಯಕ್ಷಗಾನ ಪ್ರಸಂಗಗಳು’ ಎಂಬ ವಿಷಯದ ಮೇಲೆ ಅಧ್ಯಯನ ನಡೆಸಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿ. ಪದವಿಯನ್ನು ಪಡೆದರು. ನಂತರ ಕನ್ನಡ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ...
READ MORE