ಕಾಂತಾವರ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಲ್ಲಿ ಪ್ರಕಟಿಸಿರುವ 182ನೇ ಕೃತಿ ಸಂಗೀತ ವಿದ್ವಾನ್ ಎನ್. ಕೇಶವ ಭಟ್. ಭಟ್‌ರು ನಾಡಿನಾದ್ಯಂತ ಸಂಗೀತ ಕಛೇರಿ ನಡೆಸಿಕೊಟ್ಟಿದ್ದಾರೆ. ಪುತ್ತೂರು, ವಿಟ್ಲ, ಸುಬ್ರಹ್ಮಣ್ಯ, ಧರ್ಮಸ್ಥಳ, ಬೆಂಗಳೂರು, ಶಿಡ್ಲಘಟ್ಟ, ಕೋಲಾರ, ವೆಲ್ಲೂರು, ತಿರುಪುರಕುಂಡ್ರಂ, ರಾಣಿಪೇಟೆ, ಆರ್ಕಾಟು, ಮೈಸೂರು ಮತ್ತು ಹುಬ್ಬಳ್ಳಿ ಹೀಗೆ ಹಲವಾರು ಕಡೆಗಳಲ್ಲಿ ನಡೆಸಿದ ಸಂಗೀತ ಕಚೇರಿ ಜನ ಮನ್ನಣೆಗೆ ಪಾತ್ರವಾಗಿವೆ. ಖ್ಯಾತ ಪಿಟೀಲು ವಿದ್ವಾಂಸರು ಮತ್ತು ಮೃದಂಗವಾದಕರು ತನ್ನೊಂದಿಗೆ ಈ ಕಛೇರಿಯಲ್ಲಿ ಸಹಕರಿಸಿದ್ದಾರೆ. ಕಲಿಕೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಏನೂ ಅಪೇಕ್ಷಿಸದೆ ಉಚಿತವಾಗಿ ಸಂಗೀತ ಪಾಠ ಕಲಿಸಿದ ಧನ್ಯತೆ ಇವರಿಗಿದೆ. ಕೆಳಹಂತದ ಜೂನಿಯರ್, ಸೀನಿಯರ್ ಪರೀಕ್ಷೆಗಳಿಲ್ಲದೆ ವಿದ್ವತ್ ಪರೀಕ್ಷೆಯ ತನಕ ಪಾಠ ಮಾಡಿದ ಭಟ್ಟರ ಶಿಷ್ಯ ವೃಂದ ಸುಮಾರು ಒಂದು ಸಾವಿರಕ್ಕೂ ಮಿಕ್ಕಿದೆ ಎಂಬುದೇ ಅಭಿಮಾನದ ವಿಷಯ. ಇವರ ಹಲವಾರು ಮಂದಿ ಶಿಷ್ಯರು ಸಂಗೀತ ಕ್ಷೇತ್ರದಲ್ಲಿ ಈಗಲೂ ಸಾಧನೆ ಮಾಡಿ ಸಿದ್ದಿ ಪಡೆದಿದ್ದಾರೆ. ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡುವಷ್ಟು ಪ್ರಸಿದ್ದಿ ಪಡೆದಿದ್ದಾರೆ. ಗುರುಗಳಿಗೆ ಮಾತು ಕೊಟ್ಟಂತೆ ಸಂಗೀತವನ್ನು ಮಾರಾಟದ ಸರಕಾಗಿ ಪರಿವರ್ತಿಸದೆ ಅದೊಂದು ದೈವೀಕಲೆ, ಆಧ್ಯಾತ್ಮ ಸಾಧನೆಯ ಮಾಧ್ಯಮ, ಆತ್ಮಸಂತೋಷದ ಸಾಧನವೆಂಬ ನಿಟ್ಟಿನಲ್ಲಿ ಬಳಸಿಕೊಂಡು ಬಂದಿದ್ದಾರೆ. ಭಟ್ಟರ ಜೀವನ -ಸಾಧನೆಯನ್ನು ಈ ಕೃತಿಯು ಕಟ್ಟಿಕೊಡುತ್ತದೆ.
©2024 Book Brahma Private Limited.