ಸ್ವಸಾಮರ್ಥ್ಯದಿಂದ ಸಾಹಿತ್ಯ ಕೃಷಿ ನಡೆಸಿದವರು ಲಕ್ಷ್ಮಿ ಕುಂಜತ್ತೂರು. ಕರಾವಳಿಯ ಬೋವಿ ಜನಾಂಗದಲ್ಲಿ ಹುಟ್ಟಿ ಬೆಳೆದ ಅವರು ಅಧ್ಯಯನ, ಅಧ್ಯಾಪನದ ನಡುವೆ ಸಾಮಾಜಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಆಸಕ್ತರಾಗಿದದರು. ಲಕ್ಷ್ಮಿಯವರ ಮೂರು ಕಾದಂಬರಿಗಳು ಪ್ರಕಟವಾಗಿವೆ. ಮೀನುಗಾರಿಕೆಯನ್ನು ನೆಚ್ಚಿಕೊಂಡ ಕರಾವಳಿಯ ಬೋವಿ ಜನಾಂಗದ ಚಿತ್ರಣ ಈ ಕಾದಂಬರಿಗಳಲ್ಲಿದೆ. ಲಕ್ಷ್ಮಿ ಅವರ ಬದುಕು-ಬರೆಹ ಕುರಿತ ಮಾಹಿತಿ ನೀಡುವ ಪುಸ್ತಕ. ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ’ನಾಡಿಗೆ ನಮಸ್ಕಾರ’ ಸರಣಿಯ 113ನೇ ಪುಸ್ತಕವಿದು.
©2024 Book Brahma Private Limited.