ಕಾಂತಾವರ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಲ್ಲಿ ಪ್ರಕಟಿಸಿರುವ 287ನೇ ಕೃತಿ ’ಕೋಟಿಮೂಲೆ ಗುಣವಂತೇಶ್ವರ ಭಟ್’. ಕಾರ್ಕಳದಲ್ಲಿರುವ ಕೆನರಾ ಬ್ಯಾಂಕಿನ ಸಿ. ಇ. ಕಾಮತ್ ಕರಕುಶಲ ತರಬೇತಿ ಶಾಲೆಯ ಮೊತ್ತ ಮೊದಲ ಮತ್ತು ಏಕೈಕ ಕಲಾಗುರು. ನೂರಾರು ಶಿಲ್ಪಿಗಳಿಗೆ ಗುರುವಾಗಿರುವ ಕೋಟಿಮೂಲೆ ಗುಣವಂತೇಶ್ವರ ಭಟ್ ಇಂದು `ಮಾಸ್ಟರ್ ಕ್ರಾಫ್ಟ್ ಮನ್' ಎಂಬ ಹುದ್ದೆಯಲ್ಲಿ ಮುಖ್ಯ ಶಿಲ್ಪಕಲಾ ಗುರುವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋಟಿಮೂಲೆ ಗುಣವಂತೇಶ್ವರ ಭಟ್ ಅವರು ಖ್ಯಾತ ಶಿಲ್ಪಿ. ಪುತ್ತೂರು ಸಮೀಪದ ಹನುಮಗಿರಿ ಕ್ಷೇತ್ರದ ಪಂಚಮುಖಿ ಆಂಜನೇಯ, 18 ಅಡಿ ಎತ್ತರದ ಕೋದಂಡರಾಮ ವಿಗ್ರಹ ಸೇರಿದಂತೆ ಹಲವಾರು ಪ್ರಸಿದ್ದ ಶಿಲ್ಪಕೃತಿಗಳನ್ನು ರಚಿಸಿದ್ದಾರೆ. 'ವಾದಿರಾಜ ಶೈಲಿ'ಯ ಮುಖ್ಯ ಶಿಲ್ಪಿ. ಮೊದಲು ಸಮಾಜಸೇವಕರಾಗಿ, ಮರದ ಕೆಲಸದಲ್ಲಿ ನುರಿತರಾದ ಅವರು ಜೋಗರದೊಡ್ಡಿ ಶಾಲೆಯ ಸಹಾಯಕ ಶಿಲ್ಪಿಯಾಗಿ ಉದ್ಯೋಗಿಯಾಗಿದ್ದಾರೆ.
©2024 Book Brahma Private Limited.