ಹಳೆಯಂಗಡಿ ಸುಬ್ರಾಯ (ಹರಿ) ಭಟ್

Author : ಹೆಚ್. ಶಿವಚಂದ್ರ ಭಟ್

Pages 56

₹ 45.00




Year of Publication: 2017
Published by: ಕನ್ನಡ ಸಂಘ ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಸರಣಿಯ 200 ಪುಸ್ತಕ ಹಳೆಯಂಗಡಿ ಸುಬ್ರಾಯ (ಹರಿ) ಭಟ್. ಶ್ರೀಸಾಮಾನ್ಯರಲ್ಲಿ ಮಹಾನುಭಾವ ಹಳೆಯಂಗಡಿ ಸುಬ್ರಾಯ (ಹರಿ) ಭಟ್. ಹಳೆಯಂಗಡಿ ಹರಿ ಭಟ್ಟರೆಂದೇ ಖ್ಯಾತರಾಗಿದ್ದ ಋಷಿಸದೃಶ ವ್ಯಕ್ತಿತ್ವದ ಆಯುರ್ವೇದ ವೈದ್ಯ ಹೊಯಿಗೆಗುಡ್ಡೆ ಸುಬ್ರಾಯ ಭಟ್ಟರ (1922-2006) ಬದುಕಿನ ವಿವರಗಳನ್ನು ಈ ಪುಸ್ತಕದಲ್ಲಿದಾಖಲಿಸಿದವರು ಅವರ ಪುತ್ರ ಎಚ್.ಶಿವಚಂದ್ರ ಭಟ್. ಸುಬ್ರಾಯ ಭಟ್ಟರು ಪ್ರಾಥಮಿಕ ವಿದ್ಯಾಭ್ಯಾಸದ ಬಳಿಕ ಪಾವಂಜೆ ಜ್ಞಾನಶಕ್ತಿ ದೇವಾಲಯದಲ್ಲಿ ನಡೆಯುತ್ತಿದ್ದ ವೇದಪಾಠ ಶಾಲೆಯಲ್ಲಿ ವೇದಾಧ್ಯಯನ ನಡೆಸಿದರು. ಮಾತ್ರವಲ್ಲ ತಂದೆಯವರ ಜತೆಗೆ ಗಿಡ ಮೂಲಿಕೆಗಳ ಸಂಗ್ರಹ, ಆಯುರ್ವೇದ ಔಷಧಿಗಳ ತಯಾರಿಯಲ್ಲಿ ನೆರವಾಗುತ್ತ, ರೋಗನಿದಾನ ಹಾಗೂ ಚಿಕಿತ್ಸೆಯಲ್ಲಿ ತಂದೆಗೆ ಸಹಾಯಕ ರಾಗಿ ಕಲಿಯುತ್ತ ಆಯುರ್ವೇದದಲ್ಲಿ ಪಾರಂಗತರಾದರು.

ಸುಮಾರು ಎಪ್ಪತ್ತು ವರ್ಷ ಗಳಷ್ಟು ದೀರ್ಘ ಕಾಲ ಜನಸೇವೆಯಲ್ಲಿ ತೊಡಗಿದ್ದ ಸುಬ್ರಾಯ ಭಟ್ಟರು ನೀಡಿದ್ದ ಕೆಲವು ಪವಾಡಸದೃಶ ಚಿಕಿತ್ಸೆಗಳು ಈ ಕೃತಿಯಲ್ಲಿ ಸಾಂಕೇತಿಕವಾಗಿ ದಾಖಲಾಗಿವೆ. ಜತೆಗೆ ಅವರ ಉದಾತ್ತ ಋಷಿಸದೃಶ ಚಿಂತನೆಗಳೂ ಅಲ್ಲಲ್ಲಿ ದಾಖಲಾಗಿವೆ. ಇವರನ್ನು ಪ್ರಾಚಾರ್ಯೆ ಹಿಲ್ಲಾ ಮಿರಾಂಡ 'ವೈದ್ಯ ಸಂತ' ಎಂದು ಕರೆದಿದ್ದಾರೆ. ಅವರು ತಾವು ಚಿಕಿತ್ಸೆ ಪಾರಂಭಿಸಿ ದಂದಿನಿಂದ ಕೊನೆಯ ಕ್ಷಣದವರೆಗೂ ಬಡವ-ಶ್ರೀಮಂತ, ಶಿಕ್ಷಿತ ಅಶಿಕ್ಷಿತ ಎಂಬ ಬೇಧವಿಲ್ಲದೆ, ಜಾತಿ ಮತ ಪಂಥಗಳನ್ನು ಗಮನಿಸದೆ ಸಮಾನ ರೀತಿಯಲ್ಲಿ ಸಮಾನ ಪ್ರೀತಿಯಿಂದ ವ್ಯವಹರಿಸಿ ಜನಮನ ಗೆದ್ದವರು. ಬಿಡುವಿನ ವೇಳೆಯಲ್ಲಿ ಬಾವಿ ತೋಡಲು ಒರತೆಯ ಸೆಲೆಗಳನ್ನು ತನ್ನ ಅತೀಂದ್ರಿಯ ಶಕ್ತಿಯಿಂದ ತೋರಿಸಿ ಕೊಡುವುದು, ಮನೆ ಕಟ್ಟಲು ಯೋಗ್ಯವಾದ ಸ್ಥಳಗಳನ್ನು ತೋರಿಸಿ ಕೊಡುವುದು ಮತ್ತಿತರ ಸಲಹೆಗಳನ್ನು ನೀಡುತ್ತಿದ್ದರು. ಪಾವಂಜೆ ದೇವಾಲಯದ ಅರ್ಚಕರಾಗಿ ಹಾಗೂ ತಂತ್ರಿಗಳಾಗಿಯೂ ಅವರು ಕಾರ್ಯ ನಿರ್ವಹಿಸಿದ್ದಿದೆ. ಪಾವಂಜೆ ಹರಿದಾಸ ಲಕ್ಷ್ಮೀ ನಾರಾಯಣಪ್ಪಯ್ಯನವರ ಸಮಗ್ರ ಕೀರ್ತನೆಗಳನ್ನು ಸುಬ್ರಾಯ ಭಟ್ಟರು ಸಂಪಾದಿಸಿ ಪ್ರಕಟಿಸಿದ್ದಾರೆ.

About the Author

ಹೆಚ್. ಶಿವಚಂದ್ರ ಭಟ್

ಆಯುರ್ವೇದ ವೈದ್ಯ ಹೊಯಿಗೆಗುಡ್ಡೆ ಸುಬ್ರಾಯ ಭಟ್ಟರ ಸುಪುತ್ರ ಎಚ್.ಶಿವಚಂದ್ರ ಭಟ್. ಶಿವಚಂದ್ರ ಭಟ್ಟ ಅವರೂ ಆಯುರ್ವೇದ ವೈದ್ಯ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ. ...

READ MORE

Related Books