ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 119ನೇ ಪುಸ್ತಕ. ಸೌರಶಕ್ತಿಯ ಹರಿಕಾರರಾದ ಹರೀಶ್ ಹಂದೆ ಅವರು ದೇಶದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಸೆಲ್ಕೋ ಕಂಪನಿ ಮೂಲಕ ಲಕ್ಷಾಂತರ ಬಡ ಕುಟುಂಬಗಳಿಗೆ ಬೆಳಕಿನ ಆಸರೆಯಾದವರು. ಅವರ ಸಾಧನೆಗೆ ಪ್ರತಿಷ್ಠಿತ ಮ್ಯಾಗ್ಸೇಸೆ ಪ್ರಶಸ್ತಿಯೂ ದೊರೆತಿದೆ. ಹರೀಶ್ ಹಂದೆ ಅವರ ಬದುಕು, ಸಾಧನೆಯನ್ನು ಲೇಖಕರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಲೇಖಕ ಮೋಹನ ಭಾಸ್ಕರ ಹೆಗಡೆಯವಮೂಲತಃ ಹೊನ್ನಾವರ ತಾಲೂಕಿನ ಕರ್ಕಿಯವರು. ಪ್ರಸ್ತುತ ಕುಮಟಾ ತಾಲೂಕಿನ ಹೊಸಹೆರವಟ್ಟಾ ನಿವಾಸಿ. ತಂದೆ ಕನ್ನಡ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಭಾಸ್ಕರ ಲಕ್ಷ್ಮಣ ಹೆಗಡೆ. ತಾಯಿ ಪಾರ್ವತಿ. ಪತ್ನಿ ಉಷಾ. ಮಗ ಪ್ರಮೋದ. ಓದಿದ್ದು ಬಿ.ಕಾಂ. (1987) ಡಾ. ಎ. ವಿ. ಬಾಳಿಗಾ ಕಾಲೇಜ್ ಆಫ್ ಕಾಮರ್ಸ್, ಕುಮಟಾದಲ್ಲಿ. ಯಕ್ಷಗಾನವನ್ನು ಆರಂಭಿಕವಾಗಿ ಕಲಿತಿದ್ದು ಬೆಂಗಳೂರಿನ ಯಕ್ಷದೇಗುಲದಲ್ಲಿ. ಆಮೇಲೆ ವಿಶೇಷವಾಗಿ ಅಭ್ಯಸಿಸಿದ್ದು ಯಕ್ಷಗಾನದ ಸವ್ಯಸಾಚಿ ಮೇರು ಕಲಾವಿದ ಡಾ. ಕೆರೆಮನೆ ಮಹಾಬಲ ಹೆಗಡೆಯವರಲ್ಲಿ. ಅವರನ್ನು ಯಕ್ಷಗಾನದ ಏಕಮೇವ ದಾರ್ಶನಿಕ ಕಲಾವಿದ ಅಂತಲೂ, ಅವಧೂತ ಕಲಾವಿದ ಎಂತಲೂ ...
READ MORE