ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 244 ಪುಸ್ತಕ ’ಜೀವ ರಕ್ಷಕ ಉರಗತಜ್ಞ ಗುರುರಾಜ್ ಸನಿಲ್’. ಒಂದು ರೀತಿಯಲ್ಲಿ ಉರಗ ವಿಜ್ಞಾನಿ ಎಂದು ಕರೆಯಬಹುದಾದ ಗುರುರಾಜ್ ಸನಿಲ್ ಇದುವರೆಗೆ ಸಾವಿರಾರು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ನೂರಾರು ಪ್ರಾತ್ಯಕ್ಷಿಕೆ ಗಳನ್ನು ನಡೆಸಿ ಜನರಲ್ಲಿ ಉರಗಪ್ರೀತಿಯನ್ನು ಮೂಡಿಸಿದ್ದಾರೆ. ಹಾವುಗಳ ಕುರಿತಾಗಿ ಜನರಲ್ಲಿ ನೈಜ ಅರಿವು ಮೂಡಿಸುವುದಕ್ಕಾಗಿ ಅವರು ನೂರಾರು ಪ್ರಾತ್ಯಕ್ಷಿಕೆ, ಶಿಬಿರಗಳನ್ನು ನಡೆಸಿದ್ದಾರೆ. ಅವರು ಪ್ರಕಟಿಸಿರುವ ಹಾವುಗಳ ಕುರಿತಾದ ಗ್ರಂಥಗಳು ಅವರ ನೈಜ ಅಧ್ಯಯನಶೀಲತೆಗೆ ಸಾಕ್ಷಿಯಾಗಿವೆ. ಆತ್ಮಕಥನ ಮತ್ತು ಕತೆಗಳನ್ನೂ ಬರೆದಿರುವ ಸನಿಲ್ ಅವರು ಉತ್ತಮ ಬರಹಗಾರರೂ ಹೌದು. ಅವರನ್ನು ಪರಿಚಯಿಸುವ ಕೃತಿಯಿದು.
©2025 Book Brahma Private Limited.