ಕಾಂತಾವರ ಕನ್ನಡ ಸಂಘದ ’ನಾಡಿಗೆ ನಮಸ್ಕಾರ’ ಸರಣಿಯು 195ನೇ ಪುಸ್ತಕವಿದು. ಸ್ವತಃ ಹಲವು ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿರುವ ಲೇಖಕಿಯಾಗಿರುವ ಇಂದಿರಾ ಹಾಲಂಬಿಯವರು ಸಂದೀಪ ಸಾಹಿತ್ಯ ಎಂಬ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ ಸಾಹಿತ್ಯ ಸೇವೆ ಮಾಡುತ್ತಿರುವ ಅಪೂರ್ವ ಸಾಧಕಿ. ಅವರ ಕಿರು ಪರಿಚಯವನ್ನು ವಿದ್ಯಾ ಗಣೇಶ್ ಅವರು ಈ ಕೃತಿಯಲ್ಲಿ ಮಾಡಿದ್ದಾರೆ.
ವಿದ್ಯಾ ಗಣೇಶ್ (ವಿದ್ಯಾಲಕ್ಷ್ಮೀ) ಅವರು ಜನಿಸಿದ್ದು 1958ರ ಮೇ 25 ರಂದು ಉಡುಪಿಯಲ್ಲಿ. ತಂದೆ ಶೇಷಗಿರಿ ಹಾಲಂಬಿ, ತಾಯಿ ಇಂದಿರಾ ಹಾಲಂಬಿ. ಬಿ.ಕಾಂ. ಪದವೀಧರೆ ಯಾಗಿದ್ದು ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇಪ್ಪತ್ತೆಂಟು ವರ್ಷ ಉದ್ಯೋಗಿಯಾಗಿ ಇತ್ತೀಚೆಗೆ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಸಾಹಿತ್ಯ ಪ್ರೀತಿಯನ್ನು ತಾಯಿಯ ಒಡನಾಟ, ಪ್ರೇರಣೆಗಳಿಂದ ಮೊದಲಿನಿಂದಲೂ ಬೆಳೆಸಿಕೊಂಡ ಇವರಿಗೆ ಉತ್ತಮ ಪುಸ್ತಕಗಳನ್ನು ಓದುವುದರಲ್ಲಿ ಅತೀವ ಆಸಕ್ತಿ, ಅಲ್ಲದೆ ನಾಡಿನ ಅನೇಕ ಪ್ರಮುಖ ಪತ್ರಿಕೆಗಳಲ್ಲಿ ಇವರ ಕತೆ, ಕವನ, ಲೇಖನಗಳು ಪ್ರಕಟವಾಗುತ್ತಿವೆ. ಮಂಗಳೂರು ಆಕಾಶವಾಣಿಯಲ್ಲಿ ಕವನಗಳು ಪ್ರಸಾರವಾಗಿವೆ. ಇವರ ಸ್ವಂತ ಪ್ರಕಟಿತ ಕೃತಿಗಳು 'ಒಳಹೊರಗಿನ ದನಿ', ...
READ MORE