ಕಾಂತಾವರ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಲ್ಲಿ ಪ್ರಕಟಿಸಿರುವ 283ನೇ ಕೃತಿ ’ಕಾಸರಗೋಡು ವಾಸುದೇವ ಆಚಾರ್ಯ’ . ವಾ. ಆಚಾರ್ಯ ಅವರ ಜೀವನ ಚಿತ್ರಣ ಈ ಕೃತಿಯಲ್ಲಿದೆ. ಚಿತ್ರಕಲೆಯಲ್ಲದೆ ಸಾಹಿತ್ಯ, ಸಮಾಜೋದ್ದಾರ ಮತ್ತು ಸಂಘಟನೆಗಳಲ್ಲಿ ಕೆಲಸ ನಿರ್ವಹಿಸಿದ ಬಗೆ, ಪ್ರಚಾರವೆಂದರೆ ದೂರ ನಿಲ್ಲುವ ಅವರು ತಮ್ಮ ಅಧ್ಯಾಪಕ ವೃತ್ತಿಯಲ್ಲಿ ಸಾವಿರಾರು ವಿಧ್ಯಾರ್ಥಿಗಳಿಗೆ ನೆರವು ನೀಡಿ ಸಮಾಜಕ್ಕೆ ನೀಡಿರುವ ಕಾರ್ಯಸಾಧನೆಗಳನ್ನು ಮತ್ತು ಕಾದಂಬರಿಕಾರರಾಗಿ, ಕಥೆಗರರಾಗಿ ರಚಿಸಿದ ಅನೇಕ ಕೃತಿಗಳ ಪರಿಚಯ, ಅವರ ಸ್ನೇಹಿತರು ಕಂಡಂತೆ ಇದ್ದ ಅನನ್ಯತೆಯ ಜೀವನ ಚಿತ್ರಣಗಳನ್ನೊಳಗೊಂಡಿದೆ.
©2025 Book Brahma Private Limited.