ಕಾಂತಾವರ ಕನ್ನಡ ಸಂಘದ ’ನಾಡಿಗೆ ನಮಸ್ಕಾರ’ ಸರಣಿಯ 97ನೇ ಕೃತಿಯಿದು. ’ಪುರಾಣ ಭಾರತ ಕೋಶ’ದಂತಹ ಮಹತ್ವದ ಗ್ರಂಥ ಪ್ರಕಟಿಸಿದ ಯಜ್ಞನಾರಾಯಣ ಉಡುಪರು ಕನ್ನಡದ ಮಹತ್ವದ ವಿದ್ವಾಂಸ-ಕೋಶ ರಚನಕಾರರಲ್ಲಿ ಒಬ್ಬರು. ಯಜ್ಞನಾರಾಯಣ ಬದುಕು-ಬರಹಗಳನ್ನು ಈ ಕೃತಿಯು ಪರಿಚಯಿಸುತ್ತದೆ.
ನಾರಾಯುಣೀ ದಾಮೋದರ ಅವರು ಮೂಲತಃ ಐರೋಡಿಯವರು. ಬಾಲ್ಯದ ಬಹುತೇಕ ಭಾಗವನ್ನು ಕುಂದಾಪುರದಲ್ಲಿ ಕಳೆದರು. ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರ ನಿರ್ದೇಶನದಲ್ಲಿ ಜರುಗಿದ ಬಾಲವೃಂದ, ಇವರು ನೀವು ಬಲ್ಲಿರಾ? , ಹಚ್ಚುವ ಜ್ತಾನದ ಹಣತೆಯ ಕಾರ್ಯಕ್ರಮಗಳು ಬಾನುಲಿ ಕೇಳುಗರ ಮನಸೂರೆಗೊಂಡಿದ್ದವು. ಆಕಾಶವಾಣಿ ಕಲಾವಿದರಾಗಿ ಹರಿಕಥೆ, ಭಕ್ತಿಗೀತೆ, ಭಾವಗೀತೆಗಳನ್ನು ಹಾಡಿದ್ದಾರೆ. ಹಲವು ನಾಟಕಗಳನ್ನು ನಿರ್ದೇಶಿಸಿ ಅಭಿನಯಿಸಿದ್ದಾರೆ. ಪುರಾಣ -ಉಪನಿಷತ್ತುಗಳಿಂದ ಆಯ್ದ ಕಥೆಗಳು ಆಕಾಶವಾಣಿಯಲ್ಲಿ ಪ್ರಸಾರಗೊಳಿಸಿದ್ದೂ ಸೇರಿದಂತೆ ಮತ್ತಿತರೆ ಕಥೆಗಳನ್ನು ಸೇರಿಸಿ ‘ಒಂದಾನೊಂದು ಕಾಲದಲ್ಲಿ’ ಪುಸ್ತಕ ಪ್ರಕಟಿಸಿದರು. ನಂತರ ಪ್ರಕಟವಾದ ‘ಬೆಳಕು ನೀಡುವ ಕಥೆಗಳು’ ಸಂಕಲನದ ‘ತಾಳ್ಮೆಗೆ ಒಲಿದ ಅದೃಷ್ಟ’ ಕಥೆಯು ...
READ MORE