ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ’ನಾಡಿಗೆ ನಮಸ್ಕಾರ’ ಸರಣಿಯ 102ನೇ ಪುಸ್ತಕ. ಯಕ್ಷಗಾನ ಮತ್ತು ತಾಳಮದ್ದಲೆಯಲ್ಲಿ ಗಣನೀಯ ಸಾಧನೆ ಮಾಡಿ ’ಯಕ್ಷಗಾನ ಆಚಾರ್ಯ’ ಎಂಬ ಮನ್ನಣೆಗೆ ಪಾತ್ರರಾದ ಅರ್ಕುಳ ಸುಬ್ರಾಯ ಆಚಾರ್ಯ ಅವರನ್ನು ಕುರಿತ ಪರಿಚಯಾತ್ಮಕ ಕೃತಿ. 1930ರಲ್ಲಿ ಅಯ್ಯನಕಟ್ಟೆಯಲ್ಲಿ ನಡೆದ ಎರಡು ದಿನಗಳ ಯಕ್ಷಗಾನ ಸಮ್ಮೇಳನದಲ್ಲಿ ಮೇಲಿನ ಪ್ರಶಂಸೆ ಸಂದದ್ದು ಅರ್ಕುಳ ಸುಬ್ರಾಯ ಆಚಾರ್ಯರಿಗೆ (1885-1945). ಈ ಸಮ್ಮೇಳನದ ಅಧ್ಯಕ್ಷತೆ ವಹಿಸಿದವರು ಅಂದಿನ ಜಿಲ್ಲಾ ವಿದ್ಯಾಧಿಕಾರಿಗಳಾಗಿದ್ದ ಮಂಗಳೂರಿನಲ್ಲಿ ನಡೆದ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದ ಆರ್. ತಾತಾಚಾರ್ಯ. ಅಂದು ನಡೆದ ತಾಳಮದ್ದಳೆಯ
ರಸಾಸ್ವಾದದಿಂದ ಆನಂದ ಪರವಶರಾದ ಅವರು ತಮ್ಮ ಪ್ರತಿಕ್ರಿಯೆಯನ್ನು ಕಂದಪದ್ಯಗಳಲ್ಲಿ ದಾಖಲಿಸಿದ್ದಾರೆ. ಈ 16 ಕಂದಪದ್ಯಗಳಲ್ಲಿ ಮೇಲೆ ಉದಾಹರಿಸಿದ ಪದ್ಯ ವಿಖ್ಯಾತ ಅರ್ಥಧಾರಿ, ಲೇಖಕ ಅರ್ಕುಳ ಸುಬ್ರಾಯ ಆಚಾರ್ಯರನ್ನು ಉದ್ದೇಶಿಸಿ ರಚಿಸಲಾಗಿತ್ತು. ಅದಾಗಲೇ
1927ರಲ್ಲಿ ‘ಕೃಷ್ಣ-ಸಂಧಾನ’ ಯಕ್ಷಗಾನ ಪ್ರಸಂಗಕ್ಕೆ ಸೊಗಸಾದ ಅರ್ಥವಿವರಣೆ ಬರೆದು ಪ್ರಕಟಿಸಿ ಖ್ಯಾತನಾಮರಾದ ಅರ್ಕುಳ ಸುಬ್ರಾಯ ಆಚಾರ್ಯರಿಗೆ ‘ಯಕ್ಷಗಾನ ಆಚಾರ್ಯ’ ಎಂಬ ಬಿರುದು ಕೊಡಲಾಯಿತು. ಸುಬ್ರಾಯ ಆಚಾರ್ಯರನ್ನು ಪರಿಚಯಿಸುವ ಕೃತಿಯಿದು.
©2024 Book Brahma Private Limited.