.ಉದ್ಯಮಿ, ಕೃಷಿ ತಜ್ಞ ಕಾಪು ಮುದ್ದಣ್ಣ ಶೆಟ್ಟಿ ಅವರ ಜೀವನ ಚರಿತ್ರೆ ಕುರಿತು ಲೇಖಕ ಕಲ್ಲೂರು ನಾಗೇಶ್ ಅವರು ಬರೆದ ಕೃತಿ. ಉಡುಪಿ ಜಿಲ್ಲೆಯ ಕಾಪು ಬಳಿಯ ದಂಡತೀರ್ಥ ದವರು. 1917ರಲ್ಲಿ ಇವರ ಕನ್ನಡ ಮಾಧ್ಯಮ ಶಾಲೆ ಆರಂಭಿಸಿದ್ದು ಇದೀಗ ಶತಮಾನೋತ್ಸವ ಆಚರಿಸಿಕೊಂಡಿದೆ. ಶಿಕ್ಷಣ ಪ್ರೇಮಿಗಳು, ಸಮಾಜ ಚಿಂತಕರು ಆಗಿದ್ದ ಕಾಪು ಮುದ್ದಣ್ಣ ಶೆಟ್ಟಿ ಅವರ ಬದುಕಿನ ಸಾಧನೆಗಳನ್ನು ವಿವರಿಸುವ ಕೃತಿ.
ಮಂಗಳೂರಿನ ಖ್ಯಾತ ಮುದ್ರಣ ವಿನ್ಯಾಸಕರಾಗಿರುವ ಕಲ್ಲೂರು ನಾಗೇಶ ಅವರು ತಮ್ಮ 'ಆಕೃತಿ ಪ್ರಿಂಟ್ಸ್' ಮುದ್ರಣ ಸಂಸ್ಥೆ ಮತ್ತು 'ಆಕೃತಿ ಆಶಯ ಪಬ್ಲಿಕೇಶನ್' ಮೂಲಕ ಪುಸ್ತಕ ಸಂಸ್ಕೃತಿ ಹರಡುತ್ತಿದ್ದಾರೆ. ತಮ್ಮ ಸಾಮಾಜಿಕ ಕಾಳಜಿಗಳಿಂದಾಗಿ ಪಗತಿಶೀಲ ಚಿಂತಕರಾಗಿ ಗುರುತಿಸಿಕೊಂಡ ಅವರು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನ, ದಕ್ಷಿಣ ಕನ್ನಡ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ, ಸಮದರ್ಶಿ ವೇದಿಕೆ, ಚಿತ್ತಾರ ಬಳಗ - ಮುಂತಾದ ಸಂಸ್ಥೆಗಳಲ್ಲಿ ಜನಪರ ಕೆಲಸ ಮಾಡುತ್ತಿದ್ದಾರೆ. ಪುಸ್ತಕ ವಿನ್ಯಾಸವೂ ಕಲೆಯೇ ಎಂಬುದನ್ನು ಕಾಣಿಸಿದ ನಾಗೇಶ ಅವರಿಗೆ ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ರಾಜ್ಯ ಮಟ್ಟದ 'ಪುಸ್ತಕ ಸೊಗಸು' ಬಹುಮಾನವನ್ನು ...
READ MORE