ಮಾಧವ ಭಟ್ ಅವರು ತಮ್ಮ 90 ವರ್ಷದ ಸುದೀರ್ಘ ಜೀವಿತದಲ್ಲಿ ಎರಡು ತಲೆಮಾರುಗಳ ಭಾರತೀಯ ಸಂಗೀತ ಪರಂಪರೆಯ ಕೊಂಡಿಯಾಗಿದ್ದವರು. ಹಿಂದೂಸ್ತಾನಿ ಸಂಗೀತವನ್ನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಸುವಂತೆ ಮಾಡಿದವರು. ಅವರನ್ನು ಕರಾವಳಿಯ ಹಿಂದೂಸ್ತಾನಿ ಸಂಗಿತದ ಪಿತಾಮಹ ಎಂದರೆ ತಪ್ಪಾಗಲಾರದು. ಸಂಗೀತ ಮಾತ್ರವಲ್ಲದೆ ಬಡಮಕ್ಕಳಿಗೆ ಶುಲ್ಕ ವಿಧಿಸದೆ ಪಾಠ ಹೇಳುತ್ತಿದ್ದ ಔದಾರ್ಯ ಅವರದು. ಮಾಧವ ಭಟ್ ಅವರ ಜೀವನ ಸಾಧನೆಯನ್ನು ಕಟ್ಟಿಕೊಡುವ ಕೃತಿಯಿದು. ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ’ನಾಡಿಗೆ ನಮಸ್ಕಾರ’ ಸರಣಿಯ 173 ಪುಸ್ತಕ.
©2024 Book Brahma Private Limited.