'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 217 ನೇ ಪುಸ್ತಕ. ದಕ್ಷಿಣ ಕನ್ನಡ ಜಿಲ್ಲೆಯ ಇನ್ನ ಗ್ರಾಮದವರಾದ ವಾಸು ಬಿ. ಪುತ್ರನ್ ಅವರು ಮುಂಬೈಗೆ ತೆರಳಿ ಅಲ್ಲಿಯೇ ಇದ್ದು ಅನುವಾದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಬಸವರಾಜ ಕಟ್ಟಿಮನಿ ಅವರ ’ಜೀವನ ಮತ್ತು ಕಲೆ’ ಕತೆಯ ಮೂಲಕ ಹಿಂದಿಗೆ ಅನುವಾದಿಸುವ ಕಾರ್ಯ ಆರಂಭಿಸಿದ ಅವರು ನಂತರ ಚಿತ್ತಾಲ, ಮಾಸ್ತಿ, ಆನಂದ, ಗೀತಾ ಕುಲಕರ್ಣಿ ಅವರ ಕತೆಗಳನ್ನು ಅನುವಾದಿಸಿದರು. ಎಸ್.ಎಲ್. ಭೈರಪ್ಪನವರ ’ಧರ್ಮಶ್ರೀ’ಯಿಂದ ’ಪರ್ವ’ದ ವರೆಗಿನ ಕಾದಂಬರಿಗಳನ್ನು ಅನುವಾದಿಸಿ ಪ್ರಕಟಿಸಿದ್ದಾರೆ. ವಾಸು ಬಿ. ಪುತ್ರನ್ ಅವರ ಬದುಕು-ಬರಹ ಕುರಿತು ವಿವರ ಒದಗಿಸುವ ಕೃತಿಯಿದು.
©2024 Book Brahma Private Limited.