ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಮೂರನೇ ಪುಸ್ತಕ. ಡಾ. ಉಳಿಯಾರು ಪದ್ಮನಾಭ ಉಪಾಧ್ಯಾಯರು ಭಾರತೀಯ ಭಾಷಾ ಶಾಸ್ತ್ರ, ಕಾತರ. ಹಾಗೂ ನಿಘಂಟು ರಚನಾ ಕ್ಷೇತ್ರದಲ್ಲಿ ಅಚ್ಚಳಿಯದ ಹೆಸರು. ಉಡುಪಿ ಜಿಲ್ಲೆಯ ಕಾಂತ. ಸಮೀಪದ ಉಳಿಯಾರುನವರಾದ ಉಪಾಧ್ಯಾಯರು ಸಂಸ್ಕೃತ, ಕನ್ನಡ, ಹಿಂದಿ, ಭಾಷಾಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವಿಗಳೊಂದಿಗೆ ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ ಪದವಿಯನ್ನು ಗಳಿಸಿದವರು. ತುಳು, ಕನ್ನಡ, ಸಂಸ್ಕೃತ, ಹಿಂದಿ ಮೊದಲಾದ ಹಲವಾರು ಭಾರತೀಯ ಭಾಷೆಗಳಲ್ಲದೆ ಇಂಗ್ಲೀಷ್, ಆಫ್ರಿಕನ್ ಹಾಗೂ ಫ್ರೆಂಚ್ ಮುಂತಾದ ರಾಶ್ಚಾತ್ಯ ಭಾಷೆಗಳಲ್ಲಿ ಸಮಾನ ಪ್ರೌಢಿಮೆ ಹೊಂದಿದವರು. 18 ವರ್ಷಗಳ ಸತತ ಪರಿಶ್ರಮದೊಂದಿಗೆ ಅವರು ಸಂಪಾದಿಸಿದ 6 ಸಂಪುಟಗಳ ವಿಶ್ವಕೋಶ ಮಾದರಿಯ ಬೃಹತ್ ತುಳು ನಿಘಂಟು ತುಳುನಾಡಿಗೆ ಸಂದ ಅನರ್ಥ್ಯ ಕೊಡುಗೆ, ಭಾಷಾಬೋಧನಾ ಮಾಲಿಕೆಗಳು, ಜಾನಪದ ಸಂಬಂಧೀ ಸಂಶೋಧನಾ ಗ್ರಂಥಗಳಲ್ಲದೇ ಹಲವೆಡೆ ಒಡಮೂಡಿದ ವೈಚಾರಿಕ ಲೇಖನಗಳು ಅವರ ಬಹುಮುಖ ಪ್ರತಿಭೆಗೆ ಕನ್ನಡಿಯಾಗಿವೆ.
©2024 Book Brahma Private Limited.