ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 296ನೇ ಪುಸ್ತಕ ‘ಮುಳಿಯ ಮಹಾಬಲ ಭಟ್ಟರು’. ಮುಳಿಯ ಮಹಾಬಲ ಭಟ್ಟರು ತಮ್ಮ ವೃತ್ತಿ ವೃತ್ತಿಯಿಂದ ನ್ಯಾಯವಾದಿಗಳೂ, ಪ್ರವೃತ್ತಿಯಿಂದ ಯಕ್ಷಗಾನ ತಜ್ಞರೂ ಜೊತೆಗೆ ಸಾಮಾಜಿಕ ಕಳಕಳಿಯ ಪ್ರಬುದ್ಧ ಚಿಂತಕರೂ ಆಗಿದ್ದವರು. ಅವರು ಮಂಗಳೂರಿನ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳನ್ನು ಶ್ರೀಮಂತಗೊಳಿಸಿದ ಪರಿ ಮತ್ತು ಜೀವನವನ್ನು ತೆರೆದಿಡುವ ಕೃತಿ ಇದಾಗಿದೆ.
ಮುಳಿಯ ರಾಘವಯ್ಯ ಮೂಲತಃ ಮಂಗಳೂರಿನವರು. ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿ ಭಾರತ ಸರ್ಕಾರದ ಭಾಭಾ ಪರಮಾಣು ಸಂಶೋಧನ ಕೇಂದ್ರದಲ್ಲಿ ನಾಲ್ವತ್ತು ವರ್ಷ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ತರಗತಿಗಳಿಗೆ - ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದ್ದಾರೆ. ಅವರ ವೈಜ್ಞಾನಿಕ ಪ್ರಬಂಧಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಕಟವಾಗಿವೆ. ಪರಮಾಣು ವಿಜ್ಞಾನವನ್ನು ಅರ್ಥವಾಗುವಂತೆ ಸರಳವಾದ ಭಾಷೆಯ ಮೂಲಕ ವಿಜ್ಞಾನ ಲೇಖನಗಳನ್ನು ರಚಿಸಿದ್ದಾರೆ. `ವಿಕಿರಣ ಪರಿಣಾಮ, ಪರಮಾಣು ಶಕ್ತಿ ಮತ್ತು ತುಲನಾತ್ಮಕ ವಿಪತ್ತುಗಳು' ಪುಸ್ತಕಗಳ ಸಹ ಲೇಖಕರಾಗಿದ್ದಾರೆ. ‘ಸಿರಿಗೆರಳು', 'ನೂರೈದರ ಧೀಮಂತ ಬಾಪು ರಾಮಣ್ಣ', 'ಚಿರಸ್ಕರಣೆ' ಇವು ಇವರು ಸಂಪಾದಿಸಿದ ...
READ MORE