ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 291ನೇ ಪುಸ್ತಕ ‘ಕೊಡವೂರು ಭಾಗವತ ಮಾಧವ ರಾವ್’. ಮಾಧವ ರಾವ್ ಅವರು ನಾಡಿನ ಶ್ರೇಷ್ಠ ನೃತ್ಯ ಕಲಾವಿದರು. ಪ್ರಾರಂಭದಲ್ಲಿ ಹಲವು ವರ್ಷ ಯಕ್ಷಗಾನ ರಂಗದಲ್ಲಿ ಸೇವೆಸಲ್ಲಿಸಿ, ನೃತ್ಯ ಕಲಿಯುವ ಆಸೆಯಿಂದ ಮೈಸೂರಿಗೆ ತೆರಳಿ ಒಂದು ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡು ಮೈಸೂರಿನ ಪ್ರಸಿದ್ದ ದೇವದಾಸಿ ನೃತ್ಯ ಕಲಾವಿದೆ ಮತ್ತು ಗುರು ಮೂಗೂರು ಜೇಜಮ್ಮನವರಲ್ಲಿ ಸಂಪ್ರದಾಯ ಬದ್ಧ ಶಾಸ್ತ್ರೀಯ ನೃತ್ಯ ಶಿಕ್ಷಣ ಪಡೆದು ಮೂಗೂರು ಪರಂಪರೆಯನ್ನು ಕರ್ನಾಟಕದಲ್ಲಿ ಪ್ರಚುರಪಡಿಸಿದವರು. ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ ವಿಜೇತರಾಗಿರುವ, ಕರ್ನಾಟಕ ಕಲಾ ತಿಲಕ ಎಂದು ಬಿರುದು ಪಡೆದಿರುವ ಅವರ ಜೀವನ ಮತ್ತು ನೃತ್ಯ ಕಲಾರಾಧನೆ ಬಗ್ಗೆ ಸಂಕ್ಷಿಪ್ತ ಪರಿಚಯ ಈ ಕೃತಿಯಲ್ಲಿ ಸಿಗುತ್ತದೆ.
©2025 Book Brahma Private Limited.