ಕಾಂತಾವರ ಕನ್ನಡ ಸಂಘದ ಕಾಂತಾವರ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 218 ನೇ ಪುಸ್ತಕ ’ಮಿಜಾರು ಅಣ್ಣಪ್ಪ’. ಹಾಸ್ಯ ಚಕ್ರವರ್ತಿ ಮಿಜಾರು ಅಣ್ಣಪ್ಪ ತೆಂಕುತಿಟ್ಟಿನ ಅಗ್ರಗಣ್ಯ ಕಲಾವಿದರಲ್ಲಿ ಅಣ್ಣಪ್ಪ ಒಬ್ಬರು. ಸುಮಾರು ಏಳು ದಶಕಗಳ ಕಾಲದ ಕಲಾಯಾತ್ರೆಯಲ್ಲಿ ತೊಡಗಿಸಿ ಕೊಂಡು ತನ್ನ ವಿಶಿಷ್ಟ ಶೈಲಿಯ ಹಾಸ್ಯದ ಮೂಲಕ ನಾಡಿನಾದ್ಯಂತ ಜನಪ್ರಿಯರಾದವರು. ಕೂಡ್ಲು, ಕುಂಡಾವು, ಕರ್ನಾಟಕ ಹಾಗೂ ಕಟೀಲು ಮೇಳಗಳಲ್ಲಿ ಕಲಾವಿದರಾಗಿ ಮೆರೆದಿದ್ದ ಅಣ್ಣಪ್ಪರು ಕರ್ನಾಟಕ ಮೇಳದಲ್ಲಿ ಸುದೀರ್ಘ ಕಾಲ ತಿರುಗಾಟ ನಡೆಸಿದವರು. ಪುರಾಣ ಪ್ರಸಂಗಗಳ ಮಕರಂದ, ವಿಜಯ, ಬಾಹುಕ, ದಾರುಕ, ರಾವಣ ಸನ್ಯಾಸಿ, ರಜಕ ಮೊದಲಾದ ಪಾತ್ರಗಳನ್ನು ರಸವತ್ತಾಗಿ ರೂಪಿಸಿದವರು. ತೆಂಕುತಿಟ್ಟಿನ ತುಳು ಯಕ್ಷಗಾನವನ್ನು ಸುವರ್ಣ ಅಧ್ಯಾಯವನ್ನಾಗಿ ರೂಪಿಸುವಲ್ಲಿ ಅಣ್ಣಪ್ಪರ ಪಾತ್ರದ ಕೊಡುಗೆ ಉಲ್ಲೇಖನೀಯ. ಅಣ್ಣಪ್ಪ ಅವರ ಜೀವನ-ಸಾಧನೆಯನ್ನು ಪರಿಚಯಿಸುವ ಕೃತಿಯಿದು.
©2024 Book Brahma Private Limited.