ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 207ನೇ ಪುಸ್ತಕ ಪ್ರೊ. ಪ್ರಭಾಕರ ಶಿಶಿಲ. ಹಿರಿಯ ಸಾಹಿತಿ ಪ್ರೊ. ಪ್ರಭಾಕರ ಶಿಶಿಲ ಮೂಲತಃ ಕತೆಗಾರರು. ಶಿಶಿಲರು ಈಗ ಕನ್ನಡದ ಮಹತ್ವದ ಕಾದಂಬರಿಕಾರರು ಕೂಡ ಹೌದು.ರೆ. ಅವರ 'ಪುಂಸೀ' ಕಾದಂಬರಿ ಸಂಸ್ಕೃತಕ್ಕೆ ಮತ್ತು ತೆಲುಗಿಗೆ ಅನುವಾದ ಗೊಂಡಿದೆ. 'ಮಗಂಧಿ' ಇಂಗ್ಲೀಷಿಗೆ ಅನುವಾದಗೊಳ್ಳುತ್ತಿದೆ. ’ಪ್ರಭಾಕರ ಶಿಶಿಲರು ನಾನು ವಿಸ್ಮಯ, ಕುತೂಹಲ, ಮೆಚ್ಚುಗೆ ಗಳಿಂದ ಗಮನಿಸುವ ಕೆಲವು ವಿಶಿಷ್ಟ ಸಾಹಿತಿಗಳಲ್ಲಿ ಒಬ್ಬರು. ಪ್ರಾಧ್ಯಾಪಕ ಸಾಹಿತಿಗಳಲ್ಲಿ ಇವರು ಅಸಾಧಾರಣ ವ್ಯಕ್ತಿಯೆನ್ನಲು ಕಾರಣ-ಇವರ ಅಭಿರುಚಿ, ಪ್ರತಿಭೆ, ಕೃತಿ ನಿರ್ಮಿತಿ, ಸಾಧನೆ, ಶೋಧನೆಗಳ ಬಹುಮುಖತೆ! ಹೃದಯವಂತಿಕೆಯ ವಿಚಾರವಾದಿಯಾಗಿ, ಸೃಜನಶೀಲ ಕ್ರಾಂತದರ್ಶಿ ಯಾಗಿ, ಕ್ರೀಯಾಶೀಲ ಧೀಮಂತರಾಗಿ, ದೊಡ್ಡ ಕನಸುಗಾರನಾಗಿ ಕೂಡಾ ಇವರು ನನಗೆ ಇಷ್ಟವಾದವರು” – ಹೀಗೆಂದು ಶಿಶಿಲರನ್ನು ವರ್ಣಿಸಿದವರು ಕರ್ನಾಟಕದ ಬಹುದೊಡ್ಡ ವಿದ್ವಾಂಸರಾದ ಪ್ರೊ. ಅಮೃತ ಸೋಮೇಶ್ವರರು. ಕತೆಗಾರ, ಕಾದಂಬರಿಕಾರ, ಅರ್ಥಶಾಸ್ತ್ರ ಕೃತಿಗಳ ಲೇಖಕ, ಬಹುಮುಖ ಸಾಧಕ ಪ್ರಭಾಕರ ಶಿಶಿಲರ ಜೀವನ ಸಾಧನೆಗಳನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ.
©2024 Book Brahma Private Limited.