ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 203ನೇ ಪುಸ್ತಕ. ಸಾಹಿತಿ ಗಣಪತಿ ದಿವಾಣ ದಣಿವರಿಯದ ಕನ್ನಡ ಕಟ್ಟಾಳು. ಗಣಪತಿ ದಿವಾಣ ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಅಂಕಣ ಬರೆದಿರುವವರೆನ್ನಲಾಗಿದೆ. ಕಾಸರಗೋಡಿನ ಸಾಹಿತಿ ಗಣಪತಿ ದಿವಾಣ (1929 -1999) ಸಾವಿರಾರು ಪುಟಗಳನ್ನು ಬರೆದರೂ ಇವುಗಳನ್ನು ಉಳಿಸಿಕೊಳ್ಳಲಾಗದೆ ಹೋದದ್ದು ದೌರ್ಭಾಗ್ಯ. 'ಕಲಾ ಶ್ರೀಮಂತಿಕೆಯ, ಆರ್ಥಿಕವಾಗಿ ಕಡುಬಡತನದ ಕುಟುಂಬದಲ್ಲಿ ಹುಟ್ಟಿ, ಕಲಿಕೆಯಲ್ಲಿ ಪ್ರತಿಭಾವಂತರಾಗಿದ್ದರೂ ಕಲಿಯಲಾಗದೆ ಹೊಟ್ಟೆಪಾಡಿಗಾಗಿ ಊರೂರುಗಳಲ್ಲಿ ಕೆಲಸ ಮಾಡುತ್ತಾ, ಕವಿಯಾಗಿ, ಕಥೆಗಾರರಾಗಿ, ಲೇಖಕರಾಗಿ, ಅಂಕಣಕಾರರಾಗಿ, ಪತ್ರಿಕೋದ್ಯೋಗಿಯಾಗಿ ಜೀವನದುದ್ದಕ್ಕೂ ನೋವುಂಡವರು. ಸಮಾಜಕ್ಕೆ ಹಾಸ್ಯ ಸಾಹಿತ್ಯವನ್ನು ಉಣಿಸುತ್ತಾ, ಸಮಾಜ ಸೇವೆಯೊಂದಿಗೆ ಜೀವನ ಸಾರ್ಥಕಗೊಳಿಸಿದವರು. ಜೀವನವೇ ಹೋರಾಟವಾಗಿದ್ದಾಗ, ಕಾಸರಗೋಡು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಯಕ್ಷಗಾನ ಕ್ಕಾಗಿಯಷ್ಟೇ ವೇಷ ಹಾಕಿದ ದಿವಾಣರು ಎಂದಿಗೂ ಯಾವ ಸಂದರ್ಭದಲ್ಲೂ ನಿಜ ಬದುಕಿನಲ್ಲಿ ವೇಷ ಹಾಕಿದವರಲ್ಲ' ಎಂದು ಗಣಪತಿ ದಿವಾಣರ ಬದುಕನ್ನು ಅವರ ಪುತ್ರ ಶ್ರೀರಾಮ ದಿವಾಣ ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.
©2024 Book Brahma Private Limited.