ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 209ನೇ ಪುಸ್ತಕ. ಹವಿಗನ್ನಡದ ಮಹಾಕವಿ ಬಾಲ ಪರಮೇಶ್ವರ ಭಟ್ ಬಾಳಿಲ ಪರಮೇಶ್ವರ ಭಟ್ಟರು (1940-2015) ಹವಿಗನ್ನಡದ ಮೊದಲನೆಯ ಮಹಾಕಾವ್ಯ 'ಧರ್ಮವಿಜಯ'ದ ಕವಿ. ಜತೆಗೆ ಹವಿಗನ್ನಡದಲ್ಲಿ ಕಥನ ಕವನಗಳು ಮತ್ತು ಭಕ್ತಿಗೀತೆಗಳನ್ನೂ ರಚಿಸಿದ್ದಾರೆ. ಕನ್ನಡದಲ್ಲಿ ನಾಟಕಗಳು, ಕವಿತೆಗಳು, ಮಕ್ಕಳ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ. ಅವರು ಅಧ್ಯಾಪಕರಾಗಿ, ಸಾಹಿತಿಗಳಾಗಿ, ಕೃಷಿಕರೂ ಆಗಿ ಅರ್ಥಪೂರ್ಣವಾದ ಬದುಕನ್ನು ನಡೆಸಿದವರು. ಅವರ ಪರಿಚಯವನ್ನು ಈ ಕೃತಿ ನೀಡುತ್ತದೆ.
ಡಾ. ಹರಿಕೃಷ್ಣ ಭರಣ್ಯರು (ಜನನ 1951) ತಮಿಳುನಾಡಿನ ಮದುರೈ ಕಾಮರಾಜ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಸದ್ಯ ಕುಂಬಳೆಯ ನಾರಾಯಣ ಮಂಗಲದಲ್ಲಿ ನೆಲೆಸಿದ್ದಾರೆ. ಅವರ ಹುಟ್ಟು ದಕ್ಷಿಣ ಕನ್ನಡ ಜಿಲ್ಲೆಯ ಪಾಣಾಜೆಯ ಭರಣ್ಯ. ಹವಿಗನ್ನಡ ಮಾತೃಭಾಷೆಯ ಭರಣ್ಯರು ಕನ್ನಡವಲ್ಲದೆ ಇಂಗ್ಲಿಷ್, ತಮಿಳು, ತುಳು, ಮಲಯಾಳಂ ಮತ್ತು ಹಿಂದಿ ಭಾಷೆಗಳನ್ನು ಬಲ್ಲರು. ಸಂಶೋಧನೆ - ಪ್ರವೇಶ, ಸಂಶೋಧನ ವಿಧಾನ, ಹೊಸಗನ್ನಡ ಸಾಹಿತ್ಯದ ಉಗಮ ಮತ್ತು ವಿಕಾಸ, ಹವ್ಯಕಾಧ್ಯಯನ, ಕಾವೇರಿಕಾನ ಕೃಷ್ಣ ಭಟ್ಟರ ಬದುಕು ಇತ್ಯಾದಿ ಅವರ ಕೃತಿಗಳು. ಭರಣ್ಯರು 'ಮೂಡು ಮಜಲು' ಮತ್ತು ...
READ MORE