ಕಾಂತಾವರದ ಕನ್ನಡ ಸಂಘವು ಪ್ರಕಟಿಸುತ್ತಿರುವ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 241ನೇ ಪುಸ್ತಕ ಶಾಂತಾವರ ಪೆರುವಡಿ ನಾರಾಯಣ ಭಟ್. ಹಾಸ್ಯಕ್ಕೆ ಹೊಸ ವ್ಯಾಖ್ಯಾನ ಬರೆದ ಪೆರುವಡಿ ನಾರಾಯಣ ಭಟ್. ಪೆರುವಡಿ ನಾರಾಯಣ ಭಟ್ಟರು ಯಕ್ಷಗಾನದ ಹಾಸ್ಯಕ್ಕೆ ಹೊಸ ಆಯಾಮವನ್ನು ನೀಡಿದ ಕಲಾವಿದರು. ಯಕ್ಷಗಾನದ ಹಾಸ್ಯದಲ್ಲಿ ಅಶ್ಲೀಲ ಬಾರದಂತೆ ಎಚ್ಚರ ವಹಿಸಿ, ವೇಷಗಳಲ್ಲಿ ಹೊಸತನವನ್ನೂ, ಕಲ್ಪನೆಯ ವಿಸ್ತಾರವನ್ನೂ, ಔಚಿತ್ಯವನ್ನೂ ತೋರಿದವರು. ಅವರಿಗೆ ಉತ್ತರ ಕನ್ನಡದಲ್ಲಿ 'ರಾಜಾ ಹಾಸ್ಯ ಮನ್ನಣೆಯನ್ನು ನೀಡಿ ಗೌರವಿಸಿದ್ದಾರೆ. ಸ್ವತಃ ಯಕ್ಷಗಾನ ಮೇಳದ ಯಜಮಾನ ರಾಗಿಯೂ ಪೆರುವಡಿಯವರು ಈ ಕಲೆಗೆ ಸೇವೆ ಸಲ್ಲಿಸಿದ್ದಾರೆ. ಅವಿಸ್ಮರಣೀಯವಾದ ಪೆರುವಡಿಯವರ ಕೊಡುಗೆಯನ್ನು ಸಮರ್ಥವಾಗಿ ನುಡಿ ಚಿತ್ರವಾಗಿ ದಾಖಲಿಸಲಾಗಿದೆ.
©2025 Book Brahma Private Limited.