ದೇಶಭಕ್ತ, ಸಮಾಜ ಸೇವಕ ರಾಮಕೃಷ್ಣ ಪೂಂಜ (1886-1951) ಅವರು ಮೂಲತಃ ಮುಲ್ಕಿಯವರು. ಅವರು ಒಬ್ಬ ವ್ಯಕ್ತಿಯಾಗಿದ್ದಕ್ಕಿಂತಲೂ ಹೆಚ್ಚಾಗಿ ಶಕ್ತಿಯಾಗಿದ್ದರು. ತನ್ನ ಹುಟ್ಟೂರಿನ ಅಭಿವೃದ್ಧಿಗಾಗಿ ಸಾಮಾಜಿಕ ಉನ್ನತಿಗಾಗಿ ಹಲವು ಯೋಜನೆ ಸಿದ್ಧಪಡಿಸಿ ಅನುಷ್ಠಾನಗೊಳಿಸಲು ಹೆಣಗಾಡಿದವರು. ರಾಮಕೃಷ್ಣ ಪೂಂಜ ಅವರ ಜೀವನ ಸಾಧನೆಯನ್ನು ಈ ಕೃತಿಯು ಒದಗಿಸುತ್ತದೆ. ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ’ನಾಡಿಗೆ ನಮಸ್ಕಾರ’ ಸರಣಿಯ 154ನೇ ಪುಸ್ತಕ.
ತುಳು-ಕನ್ನಡ ಉಭಯಭಾಷಾ ಕವಿ-ಸಾಹಿತಿ ಎನ್.ಪಿ. ಶೆಟ್ಟಿ ಮುಲ್ಕಿ ಅವರು ದಕ್ಷಿಣ ಕನ್ನಡದ ಮಂಗಳೂರಿನ ಮುಲ್ಕಿಯಲ್ಲಿ ಜನಿಸಿದರು. ತಂದೆ ಕುಬೆವೂರು ಪುಟ್ಟಣ್ಣ ಶೆಟ್ಟಿ. ಯಕ್ಷಗಾನ, ಯೋಗ ಕ್ಷೇತ್ರದಲ್ಲಿಯೂ ಅಪಾರ ಜನಮನ್ನಣೆಯನ್ನು ಪಡೆದಿದ್ದ ಅವರು, ಕನ್ನಡ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದು ಮುಂಬಯಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ನಂತರ ವಿಜಯಾ ಬ್ಯಾಂಕಿನ ಅಧಿಕಾರಿಯಾಗಿ ಸ್ವಯಂ ನಿವೃತ್ತಿ ಪಡೆದರು. ಅವರ ‘ಬತ್ತೆ ಕೆತ್ತರೆ ಉತ್ತರೆ, ತಪ್ಪುಗು ತರೆದಂಡ’ ಕೃತಿಗಳಿಗೆ ತುಳು ಸಾಹಿತ್ಯ ಅಕಾಡೆಮಿಯ ಕಾವ್ಯ ಪ್ರಶಸ್ತಿ ದೊರೆತಿವೆ. ತುಳು – ಕನ್ನಡ ಉಭಯಭಾಷಾ ಕವಿ, ಸಾಹಿತಿ ಎನ್.ಪಿ. ಶೆಟ್ಟಿ ಮುಲ್ಕಿ ಇವರು ಮುಲ್ಕಿಯವರೇ ಆದ ದೇಶಭಕ್ತ ಸಮಾಜಸುಧಾರಕ ...
READ MORE