ಶಿಕ್ಷಣ ತಜ್ಞ ಕೆ.ಇ. ರಾಧಾಕೃಷ್ಣ ಅವರು ಸಾಹಿತಿ-ಲೇಖಕ ಕೂಡ. ’ಕಣ್ಣಕಾಡು’ ಮಹಾಕಾವ್ಯ ಪ್ರಬಂಧ ಹಾಗೂ ’ಭಾಗೀರಥಿ ಸಮುದ್ರ ಕವನ ಸಂಕಲನ ಪ್ರಕಟಿಸಿರುವ ರಾಧಾಕೃಷ್ಣ ಅವರು ಜನಪ್ರಿಯ ಅಂಕಣಕಾರರೂ ಹೌದು. ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ’ಮುಂಗಾರು’ ಪತ್ರಿಕೆಗೆ ’ಧೃತರಾಷ್ಟ್ರನ ದಿನಚರಿ’ ಎಂಬ ಅಂಕಣ ಬರೆಯುತ್ತಿದ್ದ ಅವರು ’ಜನವಾಹಿನಿ’ ಪತ್ರಿಕೆಗೆ ’ಗೋಲಗುಮ್ಮಟ’ ಎನ್ನುವ ಅಂಕಣ ಮಾಲೆಯಲ್ಲಿ ಸಮಕಾಲೀನ ವಿಶ್ವದ ಚಟುವಟಿಕೆಗಳ ಬಗ್ಗೆ ಬರೆಯುತ್ತಿದ್ದರು. ಇಂಗ್ಲಿಷಿನಲ್ಲಿಯೂ ಬರೆದು ಪುಸ್ತಕ ಪ್ರಕಟಿಸಿರುವ ಅವರು ಅನುವಾದ ಕ್ಷೇತ್ರದಲ್ಲಿಯೂ ಗಣನೀಯ ಸಾಧನೆ ಮಾಡಿದ್ದಾರೆ. ರಾಧಾಕೃಷ್ಣ ಅವರ ಬದುಕು-ಬರೆಹ ದಾಖಲಿಸುವ ಕೃತಿಯಿದು. ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ’ನಾಡಿಗೆ ನಮಸ್ಕಾರ’ ಸರಣಿಯ 168 ಪುಸ್ತಕ.
©2025 Book Brahma Private Limited.