ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟವಾಗಿ ಗುರುತಿಸಲಾಗುವ ಕವಿ ಸುಬ್ರಾಯ ಚೊಕ್ಕಾಡಿ ಅವರು. ತಮ್ಮ ಕವಿತೆಗಳ ಮುಖಾಂತರ ಕನ್ನಡ ಸಾಹಿತ್ಯಾಭಿಮಾನಿಗಳ ಮನದಲ್ಲಿ ಮನೆ ಮಾಡಿದ ಅಪರೂಪದ ಕವಿ ಇವರು. ಇವರ ಪುಸ್ತಕಗಳು ಬಹಳ ಹಿತವಾದ ಕವಿತೆಗಳನ್ನು ಈವರೆಗೆ ಕನ್ನಡದ ಜನತೆಗೆ ನೀಡಿವೆ. ಡಾ. ದೀಪಾ ಫಡ್ಕೆ ಅವರು ಸುಬ್ರಾಯ ಚೊಕ್ಕಾಡಿಯವರ ಬಗ್ಗೆ ಮತ್ತು ಅವರ ಬರಹಗಳ ಕುರಿತಾಗಿ ಉತ್ತಮವಾದ ಪುಸ್ತಕವನ್ನು ಹೊರತಂದಿದ್ದಾರೆ. ಸಾಮಾನ್ಯವಾಗಿ ಕವಿಯ ಮನಸ್ಥಿತಿಯನ್ನು ಹೊಂದಿದ್ದ ಸುಬ್ರಾಯ ಚೊಕ್ಕಾಡಿಯವರಿಗೆ ತರ್ಕದ ಕುರಿತಾಗಿ ಅಷ್ಟು ಇಷ್ಟವಿಲ್ಲದಿದ್ದರೂ, ರಾಜಕೀಯ ತರ್ಕವನ್ನು ಬಹಳಷ್ಟು ಹಿತವಾಗಿ ನಿರೂಪಿಸಿದ ಕಾದಂಬರಿ ‘ಸಂತೆಮನೆ’ಯ ಬಗ್ಗೆ ಬಹಳಷ್ಟು ಸವಿವರವಾಗಿ ವಿವರಿಸಿದ್ದಾರೆ ದೀಪಾ ಫಡ್ಕೆ ಅವರು. ಸಣ್ಣ ಗ್ರಾಮಗಳಲ್ಲಿ ನಡೆಯುವ ರಾಜಕೀಯ ಮತ್ತು ಜಾತಿ ವ್ಯವಸ್ಥೆಯ ಕುರಿತಾದ ಅಸಮಧಾನದ ಕುರಿತು ಸಂತೆಮನೆ ಕಾದಂಬರಿಯಲ್ಲಿ ಯಾವ ರೀತಿ ಬಣ್ಣಿಸಲಾಗಿದೆ ಎಂಬುದರ ಕುರಿತು ಸುಂದವಾದ ವಿವರಣೆಯನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. ಜೊತೆಗೇ, ಸುಬ್ರಾಯ ಚೊಕ್ಕಾಡಿಯವರ ಕವನಗಳ ಕುರಿತಾಗಿ ವಿಸ್ತೃತವಾದ ವಿಶ್ಲೇಷನಾತ್ಮಕ ಬರಹಗಳನ್ನು ಈ ಪುಸ್ತಕದಲ್ಲಿ ನಮೂದಿಸಲಾಗಿದೆ.
©2024 Book Brahma Private Limited.