ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 219ನೇ ಪುಸ್ತಕ ಡಾ.ಎನ್.ನಾರಾಯಣ ಶೆಟ್ಟಿ. ಛಂದೋಬ್ರಹ್ಮ ಎಂದು ಪರಿಚಿತರಾದ ಡಾ. ನಂದಿಕೂರು ನಾರಾಯಣ ಶೆಟ್ಟಿ, ಸಿಮಂತೂರು ಅವರು ನಂದಿಕೂರಿನ ಪ್ರತಿಷ್ಠಿತ ಗುತ್ತು ಮನೆತನದವರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ನಾರಾಯಣ ಶೆಟ್ಟರು ಬಹಳ ಸಣ್ಣ ವಯಸ್ಸಿನಲ್ಲಿಯೇ 'ಕಟೀಲು ಕ್ಷೇತ್ರ ಮಹಾತ್ಮ' ಮುಂತಾದ ಯಕ್ಷಗಾನ ಪ್ರಸಂಗಗಳನ್ನು ಬರೆದು ಯಕ್ಷಗಾನ ಛಂದಸ್ಸಿನ ಕುರಿತು ಆಸಕ್ತಿ ಬೆಳೆಸಿಕೊಂಡವರು. ಮುಂದೆ ಛಂದಸ್ಸು ಅವರಿಗೆ ಆರಾಧನೆಯ ವಿಷಯವಾಯಿತು. ಯಕ್ಷಗಾನದ ಹಾಡುಗಳಲ್ಲಿ ಇದ್ದ ಛಂದಸ್ಸುಗಳ ಕುರಿತು ಅಧ್ಯಯನ ನಡೆಸಿ ಈವರೆಗೆ ಇದ್ದ ಛಂದಸ್ಸುಗಳ ವೈವಿಧ್ಯವನ್ನು ಗುರುತಿಸಿ, ಯಕ್ಷಗಾನದಲ್ಲಿ ರೂಢಿ ಯಲ್ಲಿದ್ದ ಛಂದಸ್ಸುಗಳ ಲಕ್ಷಣಗಳನ್ನು ನಿಖರವಾಗಿ ಅದೇ ರಾಗ, ತಾಳ, ಛಂದಸ್ಸಿನಲ್ಲಿ ಶಾಸ್ತ್ರೀಯವಾಗಿ ನಿರೂಪಿಸಿ ಲಕ್ಷಣಸೂತ್ರಗಳನ್ನು ನಿರ್ದೇಶಿಸಿದ ಶೆಟ್ಟರು ಇದೇ ವಿಷಯದ ಸಂಪ್ರಬಂಧಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿಯನ್ನು ಪಡೆದವರು. ಅವರ ಬದುಕು-ಬರಹವನ್ನು ಕುರಿತ ಮಾಹಿತಿಯನ್ನು ಈ ಪುಸ್ತಕ ನೀಡುತ್ತದೆ.
©2024 Book Brahma Private Limited.