ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 215ನೇ ಪುಸ್ತಕವಿದು. ಕಾಂತಾವರ ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ ಹರಿದಾಸ, ಆಶುಕವಿ. ಪಾವಂಜೆ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯನವರು (1854-1924) ದಕ್ಷಿಣ ಕನ್ನಡದ ಖ್ಯಾತ ಹರಿದಾಸರು, ಶಿವಬ್ರಾಹ್ಮಣ ಸಮುದಾಯದವರಾದ ಅವರು ಗೌಡಸಾರಸ್ವತ ಬ್ರಾಹ್ಮಣ ಸಮುದಾಯದ ಕಾಶೀಮಠದ ಶ್ರೀಭುವನೇಂದ್ರತೀರ್ಥ ಸ್ವಾಮೀಜಿಯವರ ಆಶ್ರಯದಲ್ಲಿದ್ದು ಸಂಸ್ಕೃತ ಭಾಷೆ, ಕಾವ್ಯಾದಿಗಳನ್ನು ಅಭ್ಯಾಸಮಾಡಿದವರು. ದೈತ ಮತದ ತತ್ವಗಳನ್ನೇ ಅನುಸಂಧಾನ ಮಾಡಿ ಮಾಧ್ವ ಸಂಪ್ರದಾಯಕ್ಕನುಸಾರವಾದ ಕೀರ್ತನೆಗಳನ್ನು ರಚಿಸಿದ ಆಶುಕವಿಗಳು ಅವರು. ಕೀರ್ತನೆಗಳಲ್ಲದೆ ಹರಿಕಥೆಯ ಹಾಡುಗಳು, ಪರೂಪದ ಹಾಡುಗಳು, ಮನರಂಜನೆ - ಬೈಗುಳ ಹಾಡುಗಳು ಇತ್ಯಾದಿ ಕನ್ನಡ, ತುಳು (ಕೊಂಕಣಿ?) ಭಾಷೆಗಳಲ್ಲಿ ಸುಮಾರು 300-500 ಕೀರ್ತನೆಗಳನ್ನು ಅವರು ರಚಿಸಿರಬಹುದು ಎಂದು ಅಂದಾಜಿಸಲಾಗಿದೆ. ಅವುಗಳಲ್ಲಿ ಬಹಳಷ್ಟು ಅಲಭ್ಯವಾಗಿವೆ. ಈ ಪುಸ್ತಕದಲ್ಲಿ ಇದುವರೆಗೆ ಅಲಭ್ಯವಾಗಿದ್ದ ಅವರ ಕೆಲವು ರಚನೆಗಳನ್ನು ನೀಡಲಾಗಿದೆ.
©2025 Book Brahma Private Limited.