ಕಾಂತಾವರ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಲ್ಲಿ ಪ್ರಕಟಿಸಿರುವ 185ನೇ ಕೃತಿ ಬಿ.ಜಿ. ಮೋಹನ್‌ದಾಸ್. ದುಬಾಯಿ ಕರ್ನಾಟಕ ಸಂಘದ ಮೂಲಕ ನಾಡು ನುಡಿಗೆ ಸೇವೆ ಸಲ್ಲಿಸಿದ ಸಾಧಕ, ಹೊರನಾಡ ಕನ್ನಡಿಗ ಬಿ. ಜಿ. ಮೋಹನದಾಸ್ . ಸದ್ಯ ಮಣಿಪಾಲದಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಅವರು ಕುಂದಾಪುರ ತಾಲೂಕಿನ ಬಿಜೂರು ಎಂಬ ಹಳ್ಳಿಯವರು. ಬಿಜೂರು ಗೋವಿಂದಪ್ಪ ಮೋಹನ್‌ದಾಸ್, ತಂದೆ-ಬೆನ್ನೂರು ಗೋವಿಂದಪ್ಪ, ತಾಯಿ-ಸೀತಾದೇವಿ. ಇವರಿಬ್ಬರೂ ಬಿಜೂರಿನವರೇ. ತಂದೆ ಗೋವಿಂದಪ್ಪನವರು ಪೊಲೀಸ್ ಉದ್ಯೋಗದಲ್ಲಿದ್ದು ಹೆಚ್ಚಾಗಿ ಮಲೆನಾಡು ಗಳಲ್ಲೇ ಕಾರ್ಯ ನಿರ್ವಹಿಸಿದ್ದು ಆಗಾಗ ವರ್ಗಾವಣೆ ಹೊಂದುತ್ತಿದ್ದರು. ಆದುದರಿಂದಲೇ ಮೋಹನ್‌ದಾಸ್ ಅವರ ಬಾಲ್ಯಾವಸ್ಥೆ ಬೇರೆ ಬೇರೆ ಊರುಗಳಲ್ಲಿ ಬೆಳೆದುಬಂತು. ಅವರ ವಿದ್ಯಾಭ್ಯಾಸ ನಡೆದಿರುವುದು ಹೀಗೆ-ಒಂದನೆಯ ತರಗತಿ ಆಗುಂಬೆ, ಎರಡನೆಯ ತರಗತಿ ತೀರ್ಥಹಳ್ಳಿಯ ಮಾಳೂರು, ಮೂರನೆಯ ತರಗತಿಯಿಂದ ಭದ್ರಾವತಿ, ಉಳಿದ ತರಗತಿಗಳು ಸಂತೆಬೆನ್ನೂರು. ಮಲೆನಾಡಿನಿಂದ ಕರಾವಳಿ ಪ್ರದೇಶಕ್ಕೆ ವರ್ಗಾವಣೆಯಾಗಿ ಬಂದ ಮೇಲೆ ಬೈಂದೂರು ಪ್ರೌಢಶಾಲೆಯಲ್ಲಿ ಸೇರಿಕೊಂಡರು. ಮುಂದೆ ಉಡುಪಿ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ. ಆಯಿತು. ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪಡೆದರು. ದುಬೈಗೆ ತೆರಳಿದ ಮೋಹನ್‌ದಾಸ್ ಅವರ ಜೀವನ-ಸಾಧನೆಯನ್ನು ಈ ಕೃತಿ ಕಟ್ಟಿಕೊಡುತ್ತದೆ.
©2025 Book Brahma Private Limited.