ಅಭಿಜಾತ ಕಾವ್ಯ ವ್ಯಾಖ್ಯಾನಕಾರರಾಗಿರುವ ಪ್ರೊ. ಪಿ. ಸುಬ್ರಾಯ ಭಟ್ ಅವರ ಕುರಿತು ಕಾಂತಾವರ ಕನ್ನಡ ಸಂಘ ಈ ಕೃತಿಯನ್ನು ಪ್ರಕಟಿಸಿದೆ. 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 255ನೇ ಪುಸ್ತಕವಾಗಿದೆ. ಕರಾವಳಿ ಕರ್ನಾಟಕದ ಪಂಡಿತ ಪರಂಪರೆಗೆ ಸೇರಿದವರಲ್ಲಿ ಪಿ. ಸುಬ್ರಾಯ ಭಟ್ ಅವರು ಪ್ರಮುಖರು. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗವನ್ನು ಕಟ್ಟಿ ಬೆಳೆಸಿದ ಪ್ರೊ. ಪಿ. ಸುಬ್ರಾಯ ಭಟ್ಟರು. ಸಂಸ್ಥೆಯ ಇತಿಹಾಸದ ದೃಷ್ಟಿಯಿಂದ ಅವರು ಕಾಲೇಜಿನಲ್ಲಿದ್ದ ಕಾಲ ಪ್ರಸ್ವವಾಗಿದ್ದರೂ (ಸು.19 ವರ್ಷ) ಅವರು ಮಾಡಿದ ಕಾರ್ಯಗಳು, ಸಲ್ಲಿಸಿದ ಸೇವೆ, ನೀಡಿದ ಕೊಡುಗೆ ಅವಿಸ್ಮರಣೀಯ ಹಾಗೂ ಅವಲೋಕನೀಯ. 'ಶಾಸ್ತ್ರ ಸಾಹಿತ್ಯ ವಿಹಾರಿ' ಎನ್ನುವ ವಿಶೇಷಣ ಇವರಿಗೆ ಚೆನ್ನಾಗಿ ಒಪ್ಪುತ್ತದೆ. ದಕ್ಷಿಣ ಕನ್ನಡದ ಪಂಡಿತ ಪರಂಪರೆಯ ಗಟ್ಟಿ ಕೊಂಡಿಯಾಗಿ ಕಾಣಿಸುವ ಇವರು ಶಬ್ದಮಣಿ ದರ್ಪಣದಂತಹ ಶಾಸ್ತ್ರಗ್ರಂಥಗಳನ್ನೂ, ಸೃಜನಶೀಲ ಸಾಹಿತ್ಯವನ್ನೂ ರಸಾರ್ದ್ರವಾಗಿ ಬೋಧಿಸಬಲ್ಲವರು.
©2025 Book Brahma Private Limited.