ಕಾಂತಾವರ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಲ್ಲಿ ಪ್ರಕಟಿಸಿರುವ 187ನೇ ಕೃತಿ ಮೂಲಿಕಾ ತಜ್ಞ ವೆಂಕಟರಾಮ ದೈತೋಟ. ಆಧುನಿಕ ವೈದ್ಯ ಪದ್ಧತಿಯಿಂದ ರೋಗ ಗುಣವಾಗದೆ, ಮೂಲಿಕಾ ಚಿಕಿತ್ಸೆಗೆ ಶರಣಾಗಿ ಸಂಪೂರ್ಣ ಗುಣ ಹೊಂದಿದವರು ಹಲವರು. 'ಇಂತಹ ಕಾಯಿಲೆಗಳು ಎಷ್ಟೋ ಇವೆ. ಕಳೆದ ಹಲವು ವರುಷಗಳಿಂದ ಇಂತಹ ಪ್ರಕರಣಗಳು ಸಾಕಷ್ಟಿವೆ. ಇದು ಆಧುನಿಕ ವೈದ್ಯ ಪದ್ಧತಿಯ ದೋಷವಲ್ಲ. ವೈದ್ಯರ ತಪ್ಪು ಚಿಕಿತ್ಸೆಯಿಂದ ಆದಂತಹ ತೊಂದರೆ' – ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಾಣಾಜೆಯ ಮೂಲಿಕಾ ವೈದ್ಯ ಪಿ.ಎಸ್.ವೆಂಕಟರಾಮ ದೈತೋಟ. ದೈತೋಟರಿಗೆ ಆಯುರ್ವೆದ ಜ್ಞಾನ ಪಾರಂಪರಿಕ, ಅಜ್ಞ ವೈದ್ಯ ಶಂಕರನಾರಾಯಣ ಭಟ್, ತಂದೆ ಪಂಡಿತ ಶಂಕರನಾರಾಯಣ ಭಟ್ ಇವರ ಬಳುವಳಿ. ಅವರು 'ಪಾಣಾಜೆ ಪಂಡಿತ'ರೆಂದೇ ಖ್ಯಾತರಾಗಿದ್ದರು. ವೆಂಕಟರಾಮ ದೈತೋಟರ ಜೀವನ-ಸಾಧನೆಯನ್ನು ಈ ಕೃತಿಯು ಪರಿಚಯಿಸುತ್ತದೆ.
©2025 Book Brahma Private Limited.