ಶಾಸಕ, ಸಂಸದ ಹಾಗೂ ಏಕೀಕರಣಕ್ಕಾಗಿ ಶ್ರಮಿಸಿದ ಬಿ.ವಿ. ಕಕ್ಕಿಲ್ಲಾಯ ಅವರ ಸಹೋದರ ಬಿ.ಎಸ್. ಕಕ್ಕಿಲ್ಲಾಯ ಅವರು ಕೂಡ ತಮ್ಮದೇ ಸ್ವಂತ ಛಾಪು-ಹೋರಾಟ ರೂಪಿಸಿಕೊಂಡವರು. ಅವರ ಸಾಧನೆಗಾಗಿ ಕರ್ನಾಟಕ ಸರ್ಕಾರವು ಸುವರ್ಣ ಕರ್ನಾಟಕ ವಿಶೇಷ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಶ್ರೀಧರ ಕಕ್ಕಿಲ್ಲಾಯ ಅವರ ಬದುಕು-ಸಾಧನೆಯನ್ನು ಈ ಕೃತಿಯು ಕಟ್ಟಿಕೊಡುತ್ತದೆ. ಕಾಂತಾವರ ಕನ್ನಡ ಸಂಘವು ನಾಡಿಗೆ ನಮಸ್ಕಾರ ಸರಣಿಯಲ್ಲಿ ಪ್ರಕಟಿಸಿದ 105ಕೃತಿ.
ಓದು, ಬರಹ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಾಹಿತ್ಯ ಲೋಕಕ್ಕೆ ಹೆಜ್ಜೆ ಇರಿಸಿದ ಲೇಖಕಿ ಶ್ಯಾಮಲಾಕುಮಾರಿ ಬೇವಿಂಜೆ. ಅವರು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಜನಿಸಿದರು. ತಂದೆ ಶ್ರೀಧರ ಕಕ್ಕಿಲ್ಲಾಯ ತಾಯಿ ಸರೋಜಿನೀದೇವಿ. ಕಾರ್ಕಳದ ಎಸ್.ವಿ.ಟಿ. ಮಹಿಳಾ ಪದವಿಪೂರ್ವ ವಿದ್ಯಾಲಯದಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿಯಾಗಿ ಹಾಗೂ ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಆಂಗ್ಲ ಭಾಷೆ ಹಾಗೂ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರೆ. ‘ಉದಯವಾಣಿ’ ಹಾಗೂ ‘ತರಂಗ’ ಪತ್ರಿಕೆಗಳಲ್ಲಿ ಅವರ ಬರಹಗಳು ಪ್ರಕಟವಾಗಿವೆ. ಕಾರ್ಕಳದ ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಸ್ಥಾಪಕ ಅಧ್ಯಕ್ಷೆ, ಉಡುಪಿ ಜಿಲ್ಲಾ ಪದವಿಪೂರ್ವ ಇಂಗ್ಲಿಷ್ ಉಪನ್ಯಾಸಕರ ಸಂಘದ ಸ್ಥಾಪಕ ಅಧ್ಯಕ್ಷೆ, ಉಡುಪಿ ಜಿಲ್ಲಾ ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷೆ ...
READ MORE