ಕಾಂತಾವರದ ಕನ್ನಡ ಸಂಘವು ಪ್ರಕಟಿಸುತ್ತಿರುವ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 248ನೇ ಕೃತಿಯಿದು. ಸಮಾಜವಾದಿ ಪತ್ರಕರ್ತ, 'ಸಂಗಾತಿ'ಯ ಮ. ನವೀನಚಂದ್ರ ಪಾಲ್ ಅವರ ಜೀವನ-ಸಾಧನೆಯನ್ನು ಕಟ್ಟಿಕೊಡುತ್ತದೆ. ಕಥೆ, ಕವನ, ಸಾಹಿತ್ಯದ ಸುತ್ತವೇ ಸುತ್ತುತ್ತಿದ್ದ ಕನ್ನಡ ಪತ್ರಿಕೋದ್ಯಮಕ್ಕೆ ಜನಪರ ಧ್ವನಿಯಾದ 'ಸಂಗಾತಿ'ಯ ಮೂಲಕ ಹೊಸ ರೂಪು ನೀಡಿದವರು ಮ. ನವೀನಚಂದ್ರ ಪಾಲ್. ನಿರಂತರ ತನಿಖಾ ವರದಿಗಳನ್ನು ಪ್ರಕಟಿಸಿ ಆಡಳಿತದ ಚಳಿ ಬಿಡಿಸಿದ ಧೀಮಂತ ಪತ್ರಕರ್ತ, ರಂಗಭೂಮಿ ಕಲಾವಿದ, ಗಾಯಕ, ಮಾನವ ಪ್ರೇಮಿ, ಸಹೃದಯಿ. ನವೀನಚಂದ್ರರು ಹುಟ್ಟುಹಾಕಿದ, ರೂಪಿಸಿದ ಸಂಗಾತಿಯನ್ನು ಮೆಚ್ಚದವರೇ ಇಲ್ಲ. ಸಾಮಾನ್ಯ ಓದುಗರಿಂದ ಹಿಡಿದು ಲೇಖಕರವರೆಗೆ ಒಂದಲ್ಲ ಒಂದು ಕಾರಣಕ್ಕೆ ಎಲ್ಲರೂ ಸಂಗಾತಿಯನ್ನು ಮೆಚ್ಚುವವರೇ. ನವೀನಚಂದ್ರ ಪಾಲರ ಸಾಗರದಂಥ ವ್ಯಕ್ತಿತ್ವವನ್ನು ಈ ಕೃತಿ ಕಟ್ಟಿಕೊಡುತ್ತದೆ.
©2025 Book Brahma Private Limited.