ಸಿ.ಹೆಚ್‌. ಕೋಚಣ್ಣ ರೈ

Author : ಜಗನ್ನಾಥ ರೈ

Pages 56

₹ 45.00




Year of Publication: 2017
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 208ನೇ ಪುಸ್ತಕಸಿ.ಹೆಚ್. ಕೋಚಣ್ಣ ರೈ. ನಿವೃತ್ತ ತಹಶೀಲ್ದಾರ್‌, ಗಾಂಧೀವಾದಿ ಸಿ. ಹೆಚ್. ಕೋಚಣ್ಣ ರೈ ಪುತ್ತೂರಿನಲ್ಲಿ ಓರ್ವ ದಿಟ್ಟ ನಿಷ್ಠಾವಂತ ಅಧಿಕಾರಿಯಾಗಿ ಜನ ಸೇವೆಯಲ್ಲಿ ತೊಡಗಿಸಿಕೊಂಡರು. ಶಾಶ್ವತವಾಗಿ ಉಳಿಯುವಂತಹ ಜನೋಪಯೋಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ನಿವೃತ್ತ ತಹಶೀಲ್ದಾರ್‌, ಗಾಂಧೀವಾದಿ ಸಿ.ಹೆಚ್. ಕೋಚಣ್ಣ ರೈಗಳು. ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಳದ ಮುಂಭಾಗದ ವಿಶಾಲವಾದ ಗದ್ದೆಗಳನ್ನು ದೇವಳಕ್ಕೆ ಪಡೆದುಕೊಂಡದ್ದು, ಪುತ್ತೂರಿನ ಬೈಪಾಸ್ ರಸ್ತೆ ಇತ್ಯಾದಿ ಬಹುಕಾಲ ನೆನಪಿನಲ್ಲಿ ಉಳಿಯುತ್ತವೆ. ಪುತ್ತೂರಿನ ಸರ್ವಾಂಗೀಣ ಅಭಿವೃದ್ದಿಗೆ ಅವರ ಸೇವೆ ಅಪಾರ.

 

About the Author

ಜಗನ್ನಾಥ ರೈ

ಪುತ್ತೂರಿನ ನಿವೃತ್ತ ಉಪ ತಹಶೀಲ್ದಾರ್‌ ಜಗನ್ನಾಥ ರೈ ಅವರು ಕನ್ನಡ ಸಾಹಿತ್ಯದ ಎಂ.ಎ. ಪದವೀಧರರು. ಉಪ ತಹಶೀಲ್ದಾರ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ಕೃಷಿಯೊಂದಿಗೆ ತಮ್ಮದೇ ಸ್ವಂತ ಕಛೇರಿಯಲ್ಲಿ ಸಾರ್ವಜನಿಕರಿಗೆ ಕಂದಾಯ ಇಲಾಖಾ ಮಾಹಿತಿ ಮತ್ತು ಸೇವೆಗಳನ್ನು ಮುಂದುವರಿಸುತ್ತಿದ್ದಾರೆ. ಉದಯವಾಣಿ, ತುಷಾರ ಮುಂತಾದ ಪತ್ರಿಕೆಗಳಲ್ಲಿ ಹಿಂದೆ (80ರ ದಶಕದ ತನಕ) ಲೇಖನ, ಕಥೆ, ಕವನಗಳನ್ನು ಬರೆದು ಪ್ರಕಟವಾಗುತ್ತಿದ್ದುದು ಈಗ ನೆನಪು. ಆನಂತರ ವೈಯಕ್ತಿಕ ಕಾರಣಗಳಿಂದ ಬರಹ ನಿಲ್ಲಿಸಿದರೂ ಸಾಹಿತ್ಯದ ಪ್ರೀತಿಯನ್ನು ಉಳಿಸಿಕೊಂಡಿದ್ದಾರೆ. ಕೋಚಣ್ಣ ರೈಗಳ ಸಂಪರ್ಕಕ್ಕೆ ಸುಳ್ಯ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬಂದ ಜಗನ್ನಾಥ ರೈಗಳು ಕೋಚಣ್ಣ ...

READ MORE

Related Books